ಮಸ್ಕಿ : ಮಸ್ಕಿ ತಾಲೂಕಿನ ಹಾಲಾಪುರ ಗ್ರಾಮದ ರಂಗಪ್ಪ ಮ್ಯಾಗಳಮನಿ ಇವರು ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿ ಸುಧೀರ್ಘವಾಗಿ ಇಪ್ಪತ್ತಕ್ಕೂ ವರ್ಷಗಳ ಕಾಲ ಡಿಇಒ ಆಗಿ ಸೇವೆ ಸಲ್ಲಿಸಿ,ಅಪಾರ ಸ್ನೇಹಿತರ ಬಳಗಹೊಂದಿದ್ದು, ಅವರ ಸೇವೆ ಪರಿಗಣಿಸಿ, ರಾಯಚೂರು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಅನ್ವಯ ಡಿಇಒ ಹುದ್ದೆಯಿಂದ ಕಾರ್ಯದರ್ಶಿ ಹುದ್ದೆಗೆ ಬಡ್ತಿಯನ್ನು ಅರಕೇರಿ ತಾಲ್ಲೂಕು ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯತಿಗೆ ಗ್ರೇಡ್ 2-ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿರುವ ಕಾರಣ ಇವರನ್ನು ಆತ್ಮೀಯ ಬಳಗದಿಂದ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಉಪನ್ಯಾಸಕರಾದ ಲಕ್ಶ್ಮಣ ಕರ್ಲಿ, ಹುಸೇನಬಾಷ, ಲಕ್ಶ್ಮಣ ಜೆಸ್ಕಾಂ ಕಡಬೂರು, ಪಾಶಾ ಹಿರೇ ಕಡಬೂರು ಹಾಗೂ ಇನ್ನಿತರರು ಇದ್ದರು.

