ಸಿಂಧನೂರು ಜೂಲೈ 10, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಜ್ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರ್ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್,ಪ್ರಾಥಮಿಕ ಆರೋಗ್ಯ ಕೇಂದ್ರ R. H. ನಂ. 2, ಸರ್ಕಾರಿ ಪ್ರೌಢ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಇಲಾಖೆಯಿಂದ, R,H, NO. 3 ಕ್ಯಾಂಪ್ನಲ್ಲಿ ಬಾಲ್ಯ ವಿವಾಹದ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಗೀತಾ ಹಿರೇಮಠ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು ಇವರು ಮಾತನಾಡಿದರು ಬಾಲ್ಯ ವಿವಾಹವು ಅಪ್ರಾಪ್ತ ವಯಸ್ಸಿನ ಹುಡುಗಿಯರ ದಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರವಾದ ದುಷ್ಪರಿಣಾಮಗಳನ್ನು ಬೀರುತ್ತದೆ ಇದು ಆರಂಭಿಕ ಗರ್ಭಧಾರಣೆ ಪೌಷ್ಟಿಕಾಂಶದ ಕೊರತೆ ತಾಯಿ ಮತ್ತು ಶಿಶು ಮರಣದ ಅಪಾಯ ಹಾಗೂ ಲೈಂಗಿಕ ಗಂಭೀರ ಸಮಸ್ಯೆಗಳಿಗೆ ಎಡೆ ಮಾಡಿಕೊಳ್ಳುತ್ತದೆ ಬಾಲ್ಯ ವಿವಾಹದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿಯನ್ನು ನೀಡಲಾಯಿತು ಈ ಸಂದರ್ಭದಲ್ಲಿ ಆರಂಭಿಕ ಗರ್ಭಧಾರಣೆ ಅಪ್ರಾಪ್ತ ವಯಸ್ಸಿನ ಗರ್ಭಕೋಶ ಮತ್ತು ದೇಹವು ಸಂಪೂರ್ಣವಾಗಿ ಬೆಳೆದಿರುವುದಿಲ್ಲ ಇದು ಹೆರಿಗೆಯ ಸಮಯದಲ್ಲಿ ತೀವ್ರ ರಕ್ತಸ್ರಾವ ಹೆರಿಗೆ ನೋವಿನ ಸಮಸ್ಯೆಗಳು ಮತ್ತು ತಾಯಿ ಮಗುವಿನ ಜೀವಕ್ಕೆ ಅಪಾಯವನ್ನು ತಂದುಡುತ್ತದೆ ಮತ್ತು ಪೌಷ್ಟಿಕಾಂಶದ ಕೊರತೆ ಹದಿ ಹರಿಯದ ಹೆಣ್ಣು ಮಕ್ಕಳಿಗೆ ಸ್ವತಹ ಪೌಷ್ಟಿಕ ಆಹಾರದ ಅವಶ್ಯಕತೆ ಇರುತ್ತದೆ ರಕ್ತ ಹೀನತೆಯ ಮಾನಸಿಕ ಒತ್ತಡದ ಮತ್ತು ಖಿನ್ನತೆ ಒಳಗಾಗುವುದು ಮಗುವಿನ ಆರೋಗ್ಯದ ಮೇಲಿನ ಪರಿಣಾಮ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳು ಶಿಕ್ಷಣ ಮೋಟಕು ಮತ್ತು ಕಳಪೆ ಜೀವನ ಮಟ್ಟ ಸಾಗಿಸಬೇಕಾಗುತ್ತದೆ ಎಂದು ತಿಳಿಸಲಾಯಿತು . ಬಾಲ್ಯ ವಿವಾಹದಿಂದಾಗಿ ಬಾಲಕಿಯರ ಶಿಕ್ಷಣ ಮೋಟಕುಗೊಳ್ಳುತ್ತದೆ ಇದು ಅವರ ಸ್ವಾವಲಂಬನೆಗೆ ಅಡ್ಡಿಯಾಗಿ ಬಡತನ ಮತ್ತು ಕಳಪೆ ಜೀವನ ಮಟ್ಟಕ್ಕೆ ಕಾರಣವಾಗುತ್ತದೆ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದೆ ದೈಹಿಕ ಹಾಗೂ ಲೈಂಗಿಕ ಶೋಷಣೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಇದು ಹೆಚ್ಐವಿ ಸೇರಿದಂತೆ ಲೈಂಗಿಕ ಕಾಯಿಲೆಗಳ ಸೋಂಕಿಗೆ ಕಾರಣವಾಗಬಹುದು ಬಾಲ್ಯ ವಿವಾಹದಿಂದ ಹುಟ್ಟುವ ಮಕ್ಕಳು ಸಾಮಾನ್ಯವಾಗಿ ಕಡಿಮೆ ತೂಕವನ್ನು ಹೊಂದಿರುತ್ತಾರೆ ಅಲ್ಲದೆ, ಶಿಶು ಮರಣ ಮತ್ತು ಮತ್ತು ಅಪೌಷ್ಟಿಕತೆಯ ಸಮಸ್ಯೆಗಳು ಈ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ದೈಹಿಕ ಹಾಗೂ ಮಾನಸಿಕವಾಗಿ ಮದುವೆ ಮತ್ತು ಸಂಸಾರದ ಜವಾಬ್ದಾರಿಗಳನ್ನು ಬರಲು ಸಿದ್ಧರಿರದ ಅಪ್ರಾಪ್ತ ವಯಸ್ಸಿನವರು ತೀವ್ರ ಮಾನಸಿಕ ಒತ್ತಡ ಆತಂಕ ಮತ್ತು ಖಿನ್ನತೆಗೆ ಒಳಗಾಗುತ್ತಾರೆ ಹದಿಹರೆಯದ ಹೆಣ್ಣು ಮಕ್ಕಳಿಗೆ ಸ್ವತಹ ಪೌಷ್ಠಿಕ ಆಹಾರದ ಅವಶ್ಯಕತೆ ಇರುತ್ತದೆ ಇಂತಹ ವಯಸ್ಸಿನಲ್ಲಿ ಗರ್ಭಧಾರಣಿಯಾದರೆ ರಕ್ತ ಹೀನತೆ ಮತ್ತು ಅಪೌಷ್ಟಿಕತೆಯ ಸಮಸ್ಯೆಗಳು ಕಂಡುಬರುತ್ತವೆ,HPV ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಮತ್ತು ಇತರೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುವ ವೈರಸ್ ನಿಂದ ರಕ್ಷಣೆ ನೀಡುತ್ತದೆ ಇದು 9 ವರ್ಷದಿಂದ 45 ವರ್ಷದವರಿಗೆ ಲಭ್ಯ ಇದು ಭಾರತದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ 9ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಈ ಲಸಿಕೆಯನ್ನು ವಿಶೇಷವಾಗಿ ಶಿಫಾರಸ್ಸು ಮಾಡಲಾಗಿದೆ ಇದರ ನಂತರ ವಯಸ್ಸಿನವರಿಗೆ ತಮ್ಮ ವೈದ್ಯರ ಸಲಹೆ ಮೇರೆಗೆ ಪಡೆಯಬಹುದು 15 ವರ್ಷಕ್ಕಿಂತ ಮುಂಚೆ ಲಸಿಕೆ ಹಾಕಿಸಿದರೆ ಎರಡು ರೋಜ್ಗಳು ಸಾಕು 15 ವರ್ಷದ ನಂತರ ಮೊದಲ ಡಸ್ ಪಡೆದರೆ ಮೂರು ಡೋಸ್ ಗಳು ಬೇಕಾಗುತ್ತವೆ ಉಚಿತ ಲಸಿಕೆ ಅಭಿಯಾನದಲ್ಲಿ ಭಾರತ ಸರ್ಕಾರ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಎಚ್ ಪಿ ಲಸಿಕೆ ನೀಡುವ ಅಭಿಯಾನವನ್ನು ಜಾರಿಗೆ ತಂದಿದೆ ಹೆಚ್ಚಿನ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ನಂತರ ರಾಮಾಂಜನೇಯ ಆರ್ ಕೆ ಎಸ್ ಕೆ ಕೌನ್ಸಿಲರ್ ಮಾತನಾಡಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಭಾವನಾತ್ಮಕ ದೃಷ್ಟಿಕೋನಗಳ ಸದೃಢತೆ ಕುರಿತು ಮಾದಕ ವಸ್ತುಗಳ ವೇಸನದ ಪರಿಣಾಮಗಳ ಜೊತೆಗೆ ವೈಯಕ್ತಿಕ ಶುಚಿತ್ವದ ಕುರಿತು ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಸರಸ್ವತಿ PHCO, ರೇಖಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರಾದ ಮಹಮ್ಮದ್ ಶಾಹಿದ್, ಅಮರೇಶ್, ಹನ್ಮಂತಪ್ಪ, ಶಶಿಧರ್, ಸವಿತಾ, ಅಮರೇಶ್, ಮೀನಾಕ್ಷಿ, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *