ಮಸ್ಕಿ: ಹೂವಿನಬಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಧೀರ್ಘವಾಗಿ ಶಿಕ್ಷಕರಾಗಿ,ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ವಯೊನಿವೃತ್ತಿಯಾದ ಅಮರೇಗೌಡ ಮಾ ಪಾ ಅವರ ವಯೊನಿವೃತ್ತಿ ಸಮಾರಂಭವು ಶ್ರೀ ಗವಿಸಿದ್ದೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗುರುಬಸವ ಮಹಾಸ್ವಾಮಿಗಳು ಘನಮಠೇಶ್ವರ ಮಠ ಸಂತೇಕೆಲ್ಲೂರು ನೆರವೇರಿಸಿ ಮಾತಾನಾಡಿ ಅಮರೇಗೌಡ ಮಾ ಪಾ ಮುಖ್ಯಗುರುಗಳು ತಮ್ಮ ಸುಧೀರ್ಘ 28 ವರ್ಷಗಳ ಕಾಲ ಪವಿತ್ರ ಶಿಕ್ಷಕ ವೃತ್ತಿಯಲ್ಲಿ ಸೇವೆಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ಕರುಣಿಸಿ,ಅತ್ಯುತ್ತಮ ಸೇವೆ ಸಲ್ಲಿಸಿದ್ದು ಹೆಮ್ಮೆಯ ಸಂಗತಿ, ಮುಂದಿನ ತಮ್ಮ ನಿವೃತ್ತಿ ಜೀವನ ಆರೋಗ್ಯ, ಸುಖಕರದಿಂದ ಕೂಡಿರಲ್ಲಿ ಎಂದು ಹೇಳಿದರು. ಸಾನಿದ್ಯವನ್ನು ಶ್ರೀ ಬೂದಿಬಸವ ಶಿವಚಾರ್ಯ ಸ್ವಾಮಿಗಳು ಗಬ್ಬೂರು,ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮಿಗಳು ಉಟಕನೂರು, ಶ್ರೀ ಬಸವ ಪ್ರಸಾದ ಶರಣರು ಇರಕಲ್ ಮಠ, ಸಣ್ಣಮಾಳಪ್ಪ ಎಸ್ಡಿಎಮ್ಸಿ ಅದ್ಯಕ್ಷ,ಮುಖ್ಯ ಅತಿಥಿಗಳಾಗಿ ಬಸವಂತರಾಯಕುರಿ ಲಿಂಗಸೂರು,ಚಂದ್ರಶೇಖರ ತಾಲ್ಲೂಕು ದೈಹಿಕ ಅಧಿಕಾರಿ, ಪಂಪಾಪತಿ ಹೂಗಾರ,ಕಳಕಪ್ಪ ಹಾದಿಮನಿ,ಮಂಜುನಾಥ ಹಾಲಾಪೂರ ಮುಖ್ಯಗುರು,ಶೇಖರಪ್ಪಗೌಡ ಹೂಲ್ಲುರು,ಬಸಪ್ಪ ಹಂದ್ರಾಳ ಉಪನ್ಯಾಸಕರು ಹಾಗೂ ಇನ್ನಿತರರು ಇದ್ದರು.

