ಸಿಂಧನೂರು — ಸಾಧನ ರಾಯಚೂರು (ರಿ)ಕರ್ನಾಟಕ ಫೆವಾರ್ಡ್ -ಕೆ ಹಾಗೂ ಡ್ರೀಮ್ ಇಂಡಿಯಾ ನೆಟ್ ವರ್ಕ್ ಬೆಂಗಳೂರು ವತಿಯಿಂದ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ” ಬೆಂಬಲ ಸೇವಾ ಕಾರ್ಯಗಾರ ” ಜರುಗಿತು. ಈ ಕಾರ್ಯಗಾರದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಫೆವರ್ಡ್ -ಕೆ ಹಾಗೂ ಡ್ರಿಮ್ ಇಂಡಿಯಾ ನೆಟ್ ವರ್ಕ್ ನ ಚೀಫ್ ಡೈರೆಕ್ಟರ್ ಗಳಾದ ಕಲಬುರ್ಗಿಯ ಡಾ. ಶೋಭಾರಾಣಿ ಮಾತನಾಡಿ ನಾವು ಅದೆಷ್ಟೋ ಆಶ್ರಮಗಳನ್ನು ನೋಡಿದ್ದೇವೆ ಆದರೆ ಕಾರುಣ್ಯಾಶ್ರಮವು ಕರುಣೆಯ ಕಡಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಆಶ್ರಯದಾತರುಗಳನ್ನು ನಾವುಗಳು ವೈಯಕ್ತಿಕವಾಗಿ ಸಮಲೋಚನೆ ನಡೆಸಿದಾಗ ಈ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಪದಾಧಿಕಾರಿಗಳು ಇವರ ಜೊತೆ ಸ್ವಂತ ರಕ್ತ ಸಂಬಂಧಿಗಳ ಹಾಗೆ ಬಾಂಧವ್ಯ ಹೊಂದಿರುವುದು ಮತ್ತು ಆಶ್ರಯದಾತುರುಗಳ ಹಿಂದಿನ ನೋವನ್ನು ಮರೆಸಿ ಅವರ ಸುಂದರ ಬದುಕಿಗೆ ಕಾರಣವಾದ ಈ ಸಂಸ್ಥೆಗೆ ನಮ್ಮ ಸಂಸ್ಥೆ ಸದಾವಕಾಲ ಬೆಂಬಲವಾಗಿರುತ್ತದೆ. ಮಾನವೀಯತೆಯ ಮಂದಿರವಾಗಿ ಅಂಧ-ಅನಾಥರ ಬೆಳಕಾಗಿರುವ ಕಾರುಣ್ಯ ಕುಟುಂಬ ಕಲ್ಯಾಣ ಕರ್ನಾಟಕದ ಕರುಣೆಯ ಕುಟುಂಬವಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆ ಎಂದು ಮಾತನಾಡಿ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ನಂತರ ರಾಯಚೂರು ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಮಾತನಾಡಿ ಕಾರುಣ್ಯಾಶ್ರಮದ ಸೇವೆಯಲ್ಲಿ ಭಾಗಿಯಾದರೆ ಮಾನವ ಬದುಕು ಸಾರ್ಥಕವಾಗುತ್ತದೆ. ಇಂತಹ ಪ್ರಾಮಾಣಿಕವಾದಂತಹ ಸೇವೆಗೆ ನಮ್ಮ ಸಂಸ್ಥೆಯಿಂದ ಹಾಗೂ ವೈಯಕ್ತಿಕವಾಗಿ ಸಹಾಯ ಸಹಕಾರ ನೀಡುತ್ತೇವೆ. ಎಂದು ಮಾತನಾಡಿದರು. ನಂತರ ಸಾಧನಾ ಸಂಸ್ಥೆಯ ಚೀಪ್ ಎಕ್ಸಿಕ್ಯೂಟಿವ್ ಅಧಿಕಾರಿಗಳಾದ ಶರಣಪ್ಪ ಬರ್ಸಿ ಮಾತನಾಡಿ ಹರೇಟನೂರಿನ ಶ್ರೀ ದ್ಯಾವಮ್ಮ ದೇವಿಯ ಸಾಮಾನ್ಯ ಅರ್ಚಕನಾಗಿ ಅಮರಯ್ಯ ಸ್ವಾಮಿ ಕಾರುಣ್ಯಾಶ್ರಮ ಹುಟ್ಟು ಹಾಕಿದ್ದು ದೊಡ್ಡ ಇತಿಹಾಸ. ಸುಮಾರು ವರ್ಷಗಳ ಹಿಂದೆ ಅನಾಥಾಶ್ರಮ ವೃದ್ಧಾಶ್ರಮಗಳು ಎಂದರೆ ಹೇಗಿರುತ್ತವೆ ಅಲ್ಲಿನ ಆಶ್ರಯದಾತರುಗಳ ಬದುಕು ಹೇಗಿರುತ್ತದೆ ಎನ್ನುವುದನ್ನು ತೋರಿಸಿಕೊಟ್ಟ ಕೀರ್ತಿ ಕಾರುಣ್ಯಾಶ್ರಮಕ್ಕೆ ಸಲ್ಲುತ್ತದೆ. ಮತ್ತು ವಿಶೇಷವಾಗಿ ಹರೇಟನೂರು ಹಿರೇಮಠದ ನಿರಂತರ ಸಮಾಜ ಸೇವೆ ಇತಿಹಾಸ ಪುಟದಲ್ಲಿ ಸೇರಿದೆ. ಮುಂದಿನ ದಿನಮಾನಗಳಲ್ಲಿ ಈ ಸಂಸ್ಥೆಗೆ ಫೆವರ್ಡ್ -ಕೆ ವತಿಯಿಂದ ಮತ್ತು ನಮ್ಮ ಸಂಸ್ಥೆಗಳ ವತಿಯಿಂದ ಸಹಾಯ ಸಹಕಾರ ದೊರೆಯುತ್ತದೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಫೇವರ್ಡ್ -ಕೆ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಹಾಗೂ ಡೈರೆಕ್ಟರ್ ಡಾ. ಶೋಭಾ ರಾಣಿ ಮತ್ತು ಸಾಧನಾ ಸಂಸ್ಥೆಯ ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿಗಳಾದ ಶರಣಪ್ಪ ಬರ್ಸಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಬೂ ಸುಭಾನಿ ಕೋ ಆರ್ಡಿನೇಟರ್ ಸಾಧನಾ ಸಂಸ್ಥೆ ಸಿಂಧನೂರು. ಹಾಗೂ ಡಾ. ಚನ್ನಬಸವ ಸ್ವಾಮಿ ಹಿರೇಮಠ ಕಾರ್ಯಾಧ್ಯಕ್ಷರು ಕಾರುಣ್ಯ ಆಶ್ರಮ. ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ.ಜ್ಯೋತಿ. ಮತ್ತು ಆಶ್ರಯದಾತರುಗಳು ಉಪಸ್ಥಿತರಿದ್ದರು.

