ತಾಳಿಕೋಟೆ: ಸಮಾಜದಲ್ಲಿರುವ ಎಲ್ಲ ವೃತ್ತಿಗಳು ಮಾನವ ಪ್ರಯತ್ನದಿಂದ ಸಿಗುತ್ತವೆ ಆದರೆ ಶಿಕ್ಷಕ ವೃತ್ತಿ ದೇವರ ಕೃಪೆ ಇದ್ದರೆ ಮಾತ್ರ ಸಿಗುತ್ತದೆ.ಈ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಎಂದು ಜೆಎಸ್ ಜಿ ಫೌಂಡೇಶನ್ ಕಾರ್ಯದರ್ಶಿ,ಸಾಹಿತಿ ಶ್ರೀಕಾಂತ ಪತ್ತಾರ ಹೇಳಿದರು. ತಾಲ್ಲೂಕಿನ ಬ.ಸಾಲವಾಡಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಬೋಧಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಯಾಗಿರುವ ಐ.ಎಂ.ಚಿಮ್ಮಲಗಿ ಸಹಶಿಕ್ಷಕರಿಗೆ ಸರ್ಕಾರಿ ಪ್ರೌಡಶಾಲೆ ಮತ್ತು ನಾಗರಿಕರ ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು. ಈ ಶಾಲೆಯಲ್ಲಿ 20 ವರ್ಷಗಳವರೆಗೆ ನಿರಂತರವಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಚಿಮ್ಮಲಗಿ ಅವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ್ದಾರೆ ಅವರ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಅವರ ನಿವೃತ್ತ ಜೀವನ ಸುಖಕರವಾಗಿರಲೆಂದು ಹಾರೈಸುತ್ತೇನೆ ಎಂದರು. ಸಮಾರಂಭವನ್ನು ಉದ್ಘಾಟಿಸಿ ವಿಜಯಪುರ ಡಯಟ್ ಹಿರಿಯ ಉಪನ್ಯಾಸಕಿ ರೇಣುಕಾ ಕಲ್ಬುರ್ಗಿ ಮಾತನಾಡಿ ಚಿಮ್ಮಲಗಿ ಅವರ ಸೇವಾ ನಿಷ್ಠೆಯನ್ನು ಶ್ಲಾಘಿಸಿದರು. ಸನ್ಮಾನ ಸ್ವೀಕರಿಸಿ ನಿವೃತ್ತ ಶಿಕ್ಷಕ ಚಿಮ್ಮಲಗಿ ಅವರು ಮಾತನಾಡಿ ತಾವು ಎಂದು ನನಗೆ ನೀಡಿದ ಈ ಗೌರವ ಅವಿಸ್ಮರಣೆಯವಾದದ್ದು ನಾನು ಕೇವಲ ನನ್ನ ವೃತ್ತಿಯನ್ನು ಮಾತ್ರ ನಿರ್ವಹಿಸಿದ್ದೇನೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಗೌರವಕ್ಕೆ ಋಣಿಯಾಗಿದ್ದೇನೆ ಎಂದರು. ಶಿಕ್ಷಣ ಪ್ರೇಮಿ ವೇ.ಮೂ.ಬಸಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಶಾಲೆಯ ಮುಖ್ಯಶಿಕ್ಷಕಿ ಸುಮಂಗಲಾ ಕೋಳೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ, ಕ್ಷೇತ್ರ ಸಮನ್ವಯಾಧಿಕಾರಿ ಆರ್. ಬಿ. ದಮ್ಮೂರಮಠ , ಅಕ್ಷರದಾಸೋಹ ಸಹಾಯಕ ನಿರ್ದೇಶಕ ಡಾ.ಎಂ. ಎಂ. ಬೆಳಗಲ್, ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಜಿ.ದಖನಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಾಹೇಬಗೌಡ ಅನಂತರೆಡ್ಡಿ, ಭೂದಾನಿ ಭೀಮನಗೌಡ ಅನಂತರೆಡ್ಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂಗನಗೌಡ ಲಿಂಗರೆಡ್ಡಿ,ಗ್ರಾ.ಪಂ.ಮಾಜಿ ಅಧ್ಯಕ್ಷ ಮುದಕನಗೌಡ ಹೊರಗಿನಮನಿ, ಪ್ರಮುಖರಾದರ ಮುದಕನಗೌಡ ದೊಡಮನಿ, ಶೇಖರಗೌಡ ರಾರಡ್ಡಿ, ಮಲ್ಲನಗೌಡ ಕಾರಲಕುಂಟಿ, ಭೂದಾನಿ ಭೀಮನಗೌಡ ಅನಂತರೆಡ್ಡಿ, ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರುಗಳಾದ ಪ್ರಕಾಶ ಸುರಪುರ, ಎಸ್.ಆರ್.ಮೋಮಿನ, ವಿದ್ಯಾದರ ಯಾತಗಿರಿ, ಎಸ್.ಎಸ್.ಗಡೇದ, ಟಿ.ಸಿ.ಸಜ್ಜನ, ಎ.ಎಂ.ಮೂಲಿಮನಿ, ಶಾಂತಪ್ಪನವರ, ನಿವೃತ್ತ ಮುಖ್ಯಶಿಕ್ಷಕ ಎಂ..ಜಿ.ಸುಣಗಾರ, ಬಿ.ಎಸ್.ದ್ಯಾಪುರ, ಬಿ.ಆರ್.ಪಿ ಕಾಶಿನಾಥ ಸಜ್ಜನ, ಸಿ.ಆರ್.ಪಿ.ಗಳಾದ ರಾಜು ವಿಜಾಪುರ ಹಾಗೂ ಎಸ್.ಎಂ.ಪಾಲಕಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಐ.ವಿ,ಬಡಿಗೇರ, ಉಪಸ್ಥಿತರಿದ್ದರು. ಅಜೀತ ಯಾಳಗಿ ನಿರ್ವಹಿಸಿದರು, ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿನಿ ತೇಜಶ್ವಿನಿ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮಸ್ಥರು, ಶಾಲೆ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ನೂರಾರು ಸಂಖ್ತೆಯಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಗ್ರಾಮದ ಅಗಸಿ ಬಾಗಿಲಿನಿಂದ ಶಾಲೆಯವರೆಗೆ ಅಲಂಕರಿಸಿದ ಎತ್ತಿನ ಬಂಡಿಯಲ್ಲಿ ನಿವೃತ್ತ ಶಿಕ್ಷಕ ಈರಣ್ಣ ಚಿಮ್ಮಲಗಿ ದಂಪತಿ ಸಹಿತ ಮೆರವಣಿಗೆಯ ಮೂಲಕ ಕರೆತರಲಾಯಿತು.ಶಾಲಾ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು, ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ವಿದ್ಯಾರ್ಥಿನಿಯರಿಂದ ಭರತ ನಾಟ್ಯ, ಲಂಬಾಣಿ ನೃತ್ಯ ಪ್ರದರ್ಶನ ನಡೆದವು.


