ತಾಳಿಕೋಟಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ನರ್ಸಿಂಗ್ ಆಫೀಸರ್ ಜ್ಯೋತಿ ಕೋಳೂರಗಿ, ಕಚೇರಿ ಅಧೀಕ್ಷಕಿ ಜಮುನಾ ಅರಸಂಗಿ, ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿಯಾಗಿ ಪಧೋನ್ನತಗೊಂಡ ಫಯಾಜ್ ಅತ್ತಾರ ಹಾಗೂ ತಾಲೂಕಿನ ಕೊಣ್ಣೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಶ್ರೀಶೈಲ್ ಹುಕ್ಕೇರಿ ಅವರು ಆಲಮಟ್ಟಿ ಕೆಬಿಜೆಏನ್ಎಲ್ ಆಸ್ಪತ್ರೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಸನ್ಮಾನಿಸಿ ಬಿಳ್ಕೊಡಲಾಯಿತು.ಇದೇ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನವಾಗಿ ಹಿರಿಯ ವೈದ್ಯಾಧಿಕಾರಿಗಳಾಗಿ ಜಿಲ್ಲಾ ಆಸ್ಪತ್ರೆಯಿಂದ ವರ್ಗಾವಣೆಗೊಂಡು ಬಂದಿರುವ ಡಾ.ಎ ಜಿ ಬಿರಾದಾರ ಇವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಸಂಘಗಳ ಮಹಾಮಂಡಳಿ ನಿರ್ದೇಶಕ ಆನಂದ ಬಿರಾದಾರ, ಹಿರಿಯ ವೈದ್ಯಾಧಿಕಾರಿ ಡಾ. ಮಧುಬಾಲಾ ಸಿಂಘಾಲ್,ಡಾ. ಸಾಗರ ಪಾಟೀಲ, ಸಿಬ್ಬಂದಿ ವರ್ಗದವರಾದ ನಾಗರಾಜ್ ಪಾಟೀಲ, ರಾಮನಗೌಡ ಬಿರಾದಾರ, ಇಸಾಕ್ ಚೌದ್ರಿ, ಮಹೆಬೂಬ ನಡುವಿನಮನಿ, ಆಸಿಫ್ ಕಲಕೇರಿ ಮತ್ತಿತರರು ಇದ್ದರು.

