ಸಿಂಧನೂರು ಜೂನ 28: ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಬೇಕು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದವರು ಮಕ್ಕಳ ಆರೋಗ್ಯಕ್ಕಾಗಿ ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳಿಗೆ ಪೋಲಿಯೋ ಹನಿ ಕಡ್ಡಾಯವಾಗಿ ಹಾಕಿಸಬೇಕು ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೋಲಿಯೋ ಹನಿ ಸಹಾಯ ಮಾಡುತ್ತದೆ. ಯಾವುದೇ ಮಗು ಪೋಲಿಯೋ ಹನಿಯಿಂದ ಹೊರಗೆ ಉಳಿಯದಂತೆ. ಪ್ರತಿಯೊಬ್ಬ ಸಿಬ್ಬಂದಿ ವರ್ಗದವರು ಕೆಲಸ ಮಾಡಬೇಕು ಯಾವುದೇ ಮಗು ಪೋಲಿಯೋ ಲಸಿಕೆ ಯಿಂದ ವಂಚಿತರಾಗದಂತೆ ನೋಡಿಕೊಳ್ಳಿ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಬೇಕು ಎಂದರು.
ನಂತರ ಮಾತನಾಡಿದ ತಾಲೂಕ ವೈದ್ಯಾಧಿಕಾರಿಗಳಾದ ಡಾಕ್ಟರ ಅಯ್ಯನ ಗೌಡ ಅವರು ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಒಟ್ಟು ತಾಲೂಕಿನ ವ್ಯಾಪ್ತಿಯಲ್ಲಿ 45571 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿಯನ್ನು ಹೊಂದಲಾಗಿದೆ. ನಗರದಲ್ಲಿ 8290 ಗ್ರಾಮೀಣ ಪ್ರದೇಶದಲ್ಲಿ 37281 ಮಕ್ಕಳ ಗುರಿಯನ್ನು ಹೊಂದಲಾಗಿದೆ 248 ಪೋಲಿಯೋ ಭೂತಗಳು ಕಾರ್ಯನಿರ್ವಹಿಸುತ್ತಿವೆ. 15 ಮೊಬೈಲ್ ಟೀಮ್ 14 ಟ್ರಾನ್ನಜಿಟ್ ಪಾಯಿಂಟ್ ಮಾಡಿಸಲಾಗಿದೆ ಬಸ್ಸು ನಿಲ್ದಾಣ ರೈಲು ನಿಲ್ದಾಣ ಹೊರ ಹೊಲಯದಲ್ಲಿ ಈ ಭೂತಗಳು ಕಾರ್ಯನಿರ್ವಹಿಸುತ್ತಿವೆ ಒಟ್ಟಾರೆಯಾಗಿ ದಿನಾಂಕ 28/06/2026 ರಿಂದ 01/07/2026 ಪಲ್ಸ್ ಪೋಲಿಯೋ ಕಾರ್ಯಕ್ರಮ ನೆಡೆಯುತ್ತಿದ್ದು ಯಾವುದೇ ಮಗು ಪೋಲಿಯೋ ಹನಿಯಿಂದ ಯಿಂದ ವಂಚಿತರಾಗಿದಂತೆ ನೋಡಿಕೊಳ್ಳಲಾಗುತ್ತದೆ. ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯಿಂದ ಆಗಮಿಸಿದ ಪಲ್ಸ್ ಪೋಲಿಯೋ ನೋಡೆಲ್ ಅಧಿಕಾರಿಗಳಾದ ಪ್ರಮೀಣ ಕುಮಾರ . ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾಕ್ಟರ ಕಾವೇರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಾದ ನಿಂಗನಗೌಡ. ತಾಲೂಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಸುರೇಶಗೌಡ ಡಾಕ್ಟರ ಶಿವಾನಂದ . ಸುಧಾರಾಣಿ ಅಧೀಕ್ಷಕರು ತಾಯಿ ಮತ್ತು ಮಕ್ಕಳ ಆಸ್ಪತ್ರೆ. ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ರಂಗನಾಥ . ಮತ್ತು ಸಂಗನಗೌಡ ತಾಲೂಕ ಮಟ್ಟದ ಮೇಲ್ಪಿಚಾರಕರಾದ ಎಫ್. ಎ. ಹಣಗಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ. ಶುಶ್ರೂಷಕ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಮತ್ತು ಇನ್ನಿತರರು ಉಪಸ್ಥಿತರಿದ್ದರು


