ರಾಯಚೂರು ಜೂನ್ 17 (ಕರ್ನಾಟಕ ವಾರ್ತೆ): ರಾಯಚೂರು ವಿಭಾಗದ ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯ ಅಧಿಕಾರಿಗಳ ಉಪಯೋಗಕ್ಕಾಗಿ 2026-27ನೇ ಸಾಲಿಗೆ ಮಾಸಿಕ ಬಾಡಿಗೆ ಆಧಾರದ ಮೇಲೆ 4 ಚಕ್ರದ ಹವಾ ನಿಯಂತ್ರಣ ವಾಹನ ಒದಗಿಸಲು ಆಸಕ್ತ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಷರತ್ತುಗಳಿಗೆ ಬದ್ದರಾಗಿರುವ ಅಧಿಕೃತ ನೊಂದಾಯಿತ ಟ್ರಾವೆಲ್ಸ್ ಎಜೆನ್ಸಿಯವರಿಂದ ಬಾಡಿಗೆ ಆಧಾರದ ಮೇಲೆ ಆಸಕ್ತರು ಒಂದು ಸಂಖ್ಯೆಯ ಹವಾನಿಯಂತ್ರಿತ (ಎಸಿ) ವಾಹನವನ್ನು ಒಂದು ವರ್ಷದ ಅವಧಿಗೆ ಮಾಸಿಕ ಬಾಡಿಗೆ ದರದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಿಯಲ್ಲಿ ಪಾರದರ್ಶಕತೆ ಅಧಿನಿಯಮ (ಕೆ.ಟಿ.ಪಿ.ಪಿ) 1999 ನಿಯಮಗಳು 2000ರ ಪ್ರಕಾರ ಇ-ಪ್ರೂಕ್ಯೂರಮೆಂಟ್ ಪೋರ್ಟಲ್ ಮೂಲಕ https://kppp.karnataka.gov.in ಅರ್ಜಿಯನ್ನು ಜೂನ್ 29ರೊಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0853-2220024ಗೆ ಅಥವಾ ರಾಯಚೂರಿನ ವಿದ್ಯುತ್ ಪರಿವೀಕ್ಷಕರ ಕಚೇರಿಯನ್ನು ಕಚೇರಿಯ ಅವಧಿಯಲ್ಲಿ ಸಂಪರ್ಕ ಮಾಡಬಹುದಾಗಿದೆ ಎಂದು ವಿದ್ಯುತ್ ಪರಿವೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *