ರಾಯಚೂರು ಜೂನ್ 17 (ಕರ್ನಾಟಕ ವಾರ್ತೆ): ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ.ವೆಂಕಟ್ ಸಿಂಗ್ ಅವರು ಜೂನ್ 19 ಹಾಗೂ 20ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಜೂನ್ 19ರ ಸಂಜೆ ಕಲಬುರಗಿಯಿಂದ ನಿರ್ಗಮಿಸಿ ರಾತ್ರಿ ರಾಯಚೂರಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.
ಜೂನ್ 20ರ ಬೆಳಿಗ್ಗೆ 10ಗಂಟೆಗೆ ರಾಯಚೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಆಯೋಜಿಸಿರುವ ಕಾರ್ಯಗಾರದಲ್ಲಿ ಆಯಾ ಇಲಾಖೆ ಅಧಿಕಾರಿ/ಸಿಬ್ಬಂದಿಯವರೊAದಿಗೆಚರ್ಚಿಸುವ ಸಂವಾದ ಕಾರ್ಯಗಾರದಲ್ಲಿ ಭಾಗವಹಿಸುವರು.
ಅಂದು ಮಧ್ಯಾಹ್ನ 1.30ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವರು. ನಂತರ ರಾಯಚೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಜೂನ್ 21ರ ಬೆಳಿಗ್ಗೆ 10ಗಂಟೆಗೆ ರಾಯಚೂರಿನಿಂದ ನಿರ್ಗಮಿಸಿ, ಕೇಂದ್ರ ಸ್ಥಾನ ಕಲಬುರಗಿಗೆ ಮರು ಪ್ರಯಾಣ ಬೆಳೆಸುವರು ಎಂದು ಆಯುಕ್ತರ ಆಪ್ತ ಸಹಾಯಕರಾದ ಶಿವಾನಂದ ಗು.ಬಿರಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *