ಮಾನ್ವಿ -: ಪಟ್ಟಣದ ಶ್ರೀ ಈಶ್ವರ ದೇವಸ್ಥಾನದಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರು 2026ರ ಜೂನ್ 10 ರಂದು ಸತತವಾಗಿ ಅತಿ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಎಂಬ ವಿಶಿಷ್ಟ ಗೌರವಕ್ಕೆ ಪಾತ್ರರಾಗಗಿರುವ ಸಂದರ್ಭದಲ್ಲಿ ಮಾನ್ವಿ ಬಿಜೆಪಿ ಮಂಡಲ ವತಿಯಿಂದ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯನ್ನು ಮಾಡಲಾಯಿತು. ಇದು ದೇಶದ ಇತಿಹಾಸದಲ್ಲೇ ಒಂದು ಅವಿಸ್ಮರಣೀಯ ದಿನ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸತತವಾಗಿ ಆಯ್ಕೆಯಾಗಿ 4,399 ದಿನಗಳ ಕಾಲ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುವ ಮೂಲಕ ಭಾರತದ ಇತಿಹಾಸದಲ್ಲೇ ಅತ್ಯಧಿಕ ಅವಧಿ ಅಧಿಕಾರದಲ್ಲಿರುವ ಚುನಾಯಿತ
ಪ್ರಧಾನಮಂತ್ರಿಯಾಗಿ ನೆಹರು ಅವರನ್ನು ಹಿಂದಿಕ್ಕಿ ದೀರ್ಘಾವಧಿಯ ಪ್ರಧಾನಿ ಎನಿಸಿಕೊಂಡ ಶ್ರೀ ನರೇಂದ್ರ ಮೋದಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಮೋದಿ ಜಿ ಅವರ ನೇತೃತ್ವದಲ್ಲಿ
‘ಏಕ ಭಾರತ, ಶ್ರೇಷ್ಠ ಭಾರತ’ದ ಸಂಕಲ್ಪ, ವಿಶ್ವಮಟ್ಟದ ಮೂಲಸೌಕರ್ಯ, ಡಿಜಿಟಲ್ ಕ್ರಾಂತಿ, ಶುದ್ಧ ಇಂಧನ ಕ್ಷೇತ್ರದಲ್ಲಿ ಪ್ರಗತಿ, ಆತ್ಮನಿರ್ಭರ ಭಾರತದ ನಿರ್ಮಾಣ ದೂರದೃಷ್ಟಿ ನಾಯಕತ್ವ, ಅಭಿವೃದ್ಧಿಯ ಪಯಣ ಹಾಗೂ ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರವನ್ನಾಗಿ ರೂಪಿಸುವ ಅವರ ಸಂಕಲ್ಪಕ್ಕೆ 12 ವರ್ಷದ ಗರಿಮೆ ಅವಿಸ್ಮರಣೀಯ ಸಂಗತಿಯಾಗಿದೆ ಮಾನ್ವಿ ಬಿಜೆಪಿ ಅಧ್ಯಕ್ಷರಾದ ವೀರಭದ್ರಗೌಡ ಭೋಗಾವತಿ ತಿಳಿಸಿದರು.
ಮಾನ್ವಿ ಮಂಡಲ ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಕಣ್ಣೂರು, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ದೊರೆಬಾಬು, ವೀರನಗೌಡ ವಕೀಲರು ಪೋತ್ನಾಳ, ಶಿವಲಿಂಗಯ್ಯ ಸ್ವಾಮಿ, ಜಗದೀಶ ಒತೂರು, ಕುಮಾರಸ್ವಾಮಿ ಮೇದಾ, ಉಮಾಪತಿ ನಾಯಕ, ಚಂದ್ರಶೇಖರ ನಾಯಕ, ಕೆ.ವೆಂಕಟೇಶ, ವಿಜಯಕುಮಾರ ಮೇಟಿ, ರಾಜೇಂದ್ರ ಭೋಗಾವತಿ, ಈರಣ್ಣ ನಾಯಕ, ಗೋಪಾಲ ಇಬ್ರಾಂರ್ಪು, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

