ಸಿಂಧನೂರು: ಜೂನ್ 9: ಕರ್ನಾಟಕ ರಾಜ್ಯ ಫಾರ್ಮಸಿ ಪರೀಕ್ಷಾ ಪ್ರಾಧಿಕಾರ ಮಂಡಳಿ, ಬೆಂಗಳೂರು ವತಿಯಿಂದ 2026ರ ಮಾರ್ಚ್ ತಿಂಗಳಲ್ಲಿ ನಡೆಸಲಾದ ಡಿ-ಫಾರ್ಮಸಿ ದ್ವಿತೀಯ ವರ್ಷದ ಪರೀಕ್ಷೆಗಳಲ್ಲಿ ಸಿಂಧನೂರಿನ ಸನ್ ರೈಸ್ ಡಿ-ಫಾರ್ಮಸಿ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸುವ ಮೂಲಕ ಕಾಲೇಜಿಗೆ ಹಾಗೂ ಸಿಂಧನೂರು ನಗರಕ್ಕೆ ಹೆಮ್ಮೆಯ ಕೀರ್ತಿಯನ್ನು ತಂದಿದ್ದಾರೆ.ಕಾಲೇಜಿನ ಎಲ್ಲಾ 60 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷವಾಗಿದ್ದು, ಹಲವರು ಪ್ರಥಮ ದರ್ಜೆ, ದ್ವಿತೀಯ ದರ್ಜೆ ಹಾಗೂ ತೃತೀಯ ದರ್ಜೆಗಳಲ್ಲಿ ಉತ್ತೀರ್ಣರಾಗಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಯು ಕಾಲೇಜಿನ ಶಿಕ್ಷಣದ ಗುಣಮಟ್ಟ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.ಪರೀಕ್ಷೆಯಲ್ಲಿ ತಸ್ಮಿಯಾ ತಹಸೀನ್ ಅವರು 1100 ಅಂಕಗಳಿಗೆ 906 ಅಂಕಗಳನ್ನು (82.3%) ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಸಾನಿಯಾ ಅತ್ತಾರ್ ಅವರು 869 ಅಂಕಗಳನ್ನು (79%) ಪಡೆದು ದ್ವಿತೀಯ ಸ್ಥಾನ ಗಳಿಸಿದ್ದು, ನಾಜ್ಮೀನ್ ಅವರು 862 ಅಂಕಗಳನ್ನು (78%) ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಇನ್ನು ಅಮಿತ್ ರಾಯ್ ಅವರು 828 ಅಂಕಗಳನ್ನು (75%) ಪಡೆದು ನಾಲ್ಕನೇ ಸ್ಥಾನ, ಅಯಾಜ್ ಅವರು 823 ಅಂಕಗಳನ್ನು (74%) ಗಳಿಸಿ ಐದನೇ ಸ್ಥಾನ ಹಾಗೂ ಪಾರ್ವತಿ ಅವರು 822 ಅಂಕಗಳನ್ನು (74%) ಪಡೆದು ಆರನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಯು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಕಾಲೇಜಿನ ಶೈಕ್ಷಣಿಕ ಸಾಧನೆಗೆ ಮತ್ತಷ್ಟು ಮೆರುಗು ತಂದಿದೆ.ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆ ಕುರಿತು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಇರ್ಫಾನ್ ಕೆ. ಅವರು ಸಂತಸ ವ್ಯಕ್ತಪಡಿಸಿ, “ನಮ್ಮ ಕಾಲೇಜು ನೂರಕ್ಕೆ ನೂರರಷ್ಟು ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು ಹಾಗೂ ಕಾರ್ಯದರ್ಶಿಗಳಾದ ಇರ್ಷಾದ್ ಕೆ ಅವರು ಮಾತನಾಡಿ ವಿದ್ಯಾರ್ಥಿಗಳ ಪರಿಶ್ರಮ, ಉಪನ್ಯಾಸಕರ ಶ್ರದ್ಧೆ ಮತ್ತು ಪಾಲಕರ ಸಹಕಾರದ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ. ಈ ಸಾಧನೆಯು ಸನ್ ರೈಸ್ ಡಿ-ಫಾರ್ಮಸಿ ಕಾಲೇಜಿನ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದು, ಸಿಂಧನೂರು ನಗರಕ್ಕೂ ಕೀರ್ತಿ ತಂದಿದೆ” ಎಂದು ಹೇಳಿದರು.
ಫಾರ್ಮಸಿ ಪ್ರಾಚಾರ್ಯರಾದ ವಾಸಿಮ ಹೂಸೇನ್ ಅವರು ಮಾತನಾಡಿ ನಮ್ಮ ಡಿ ಫಾರ್ಮಸಿ ಕಾಲೇಜಿಗೆ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುವುದು ತಮಗೆಲ್ಲರಿಗೂ ಸಂತಸ ತಂದಿದೆ ಸಂಸ್ಥೆಯ ಅಧ್ಯಕ್ಷರಾದ ಇರ್ಫಾನ್ ಕೆ ಅವರ ಸಹಕಾರದಿಂದ ಇಂದು ನಮ್ಮ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿವೆ ಎಂದು ಅಭಿಪ್ರಾಯಪಟ್ಟರು ಹಾಗೂ ಅಧ್ಯಕ್ಷರಾದ ಇರ್ಫಾನ್ ಕೆ, ಕಾರ್ಯದರ್ಶಿಗಳಾದ, ಇರ್ಷಾದ್ ಕೆ, ಪ್ರಾಚಾರ್ಯರಾದ ವಾಸಿಂ ಹುಸೇನ್ ಅವರು ಹಾಗೂ ಎಲ್ಲಾ ಉಪನ್ಯಾಸಕರು ಸೇರಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿ, ಅವರ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿ ಜೀವನವು ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದರು.ಈ ಸಾಧನೆಯ ಹಿಂದಿನ ಪ್ರಮುಖ ಶಕ್ತಿಯಾಗಿರುವ ಕಾಲೇಜಿನ ಪ್ರಾಂಶುಪಾಲರಾದ ವಾಸಿಂ ಹುಸೇನ್ ಅವರ ನಾಯಕತ್ವ ಹಾಗೂ ಉಪನ್ಯಾಸಕರಾದ ಚಕ್ರವರ್ತಿ, ಸಾಗರ್, ದಿಲೀಪ್ ಮತ್ತು ಹರ್ಷಿತಾ ಅವರ ನಿರಂತರ ಮಾರ್ಗದರ್ಶನವನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸ್ಮರಿಸಲಾಯಿತು.ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ, ಪರೀಕ್ಷಾ ಭಯವನ್ನು ದೂರ ಮಾಡಿ, ಸಮರ್ಪಕ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.ಹಾಗೆಯೇ ವಿದ್ಯಾರ್ಥಿಗಳ ಯಶಸ್ಸಿಗೆ ಬೆನ್ನೆಲುಬಾಗಿ ನಿಂತ ಎಲ್ಲಾ ಪಾಲಕರಿಗೂ ಅಭಿನಂದನೆಗಳನ್ನು ಸಲ್ಲಿಸಲಾಗಿದ್ದು, ಅವರ ಪ್ರೋತ್ಸಾಹ ಮತ್ತು ಸಹಕಾರದಿಂದಲೇ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಲಾಗಿದೆ.ಒಟ್ಟಾರೆ, ಸನ್ ರೈಸ್ ಡಿ-ಫಾರ್ಮಸಿ ಕಾಲೇಜಿನ ಈ ನೂರಕ್ಕೆ ನೂರರಷ್ಟು ಫಲಿತಾಂಶವು ಸಂಸ್ಥೆಯ ಶೈಕ್ಷಣಿಕ ಬದ್ಧತೆ, ಗುಣಮಟ್ಟದ ಬೋಧನೆ ಹಾಗೂ ವಿದ್ಯಾರ್ಥಿಗಳ ಪರಿಶ್ರಮದ ಪ್ರತೀಕವಾಗಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಾಧನೆಗಳು ಮುಂದುವರಿಯಲಿ ಎಂಬ ಆಶಯವನ್ನು ಶಿಕ್ಷಣ ಪ್ರೇಮಿಗಳು ವ್ಯಕ್ತಪಡಿಸಿದ್ದಾರೆ.

“ಸನ್ ರೈಸ್ ಡಿ-ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಈ ಯಶಸ್ಸಿಗೆ ಕಾರಣರಾದ ನಮ್ಮ ಫಾರ್ಮಸಿ ಪ್ರಾಚಾರ್ಯರಾದ ವಾಸಿಂ ಹುಸೇನ್ ಹಾಗೂ ಉಪನ್ಯಾಸಕರಾದ ಚಕ್ರವರ್ತಿ,ದಿಲೀಪ್, ಸಾಗರ್, ಹರ್ಷಿತ, ಹಾಗೂ ವಿದ್ಯಾರ್ಥಿಗಳು,ಪಾಲಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ವಿದ್ಯಾರ್ಥಿಗಳ ಪರಿಶ್ರಮ ಮತ್ತು ಉಪನ್ಯಾಸಕರ ಸಮರ್ಪಿತ ಮಾರ್ಗದರ್ಶನದಿಂದ ನಮ್ಮ ಸನ್ ರೈಸ್ ಡಿ ಫಾರ್ಮಸಿ ಕಾಲೇಜಿಗೆ ಹಾಗೂ ಸಿಂಧನೂರು ನಗರಕ್ಕೆ ಕೀರ್ತಿ ಬಂದಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಇನ್ನಷ್ಟು ಸಾಧನೆಗಳು ಮೂಡಿಬರಲಿ”ಎಂದು ಆಶಿಸುತ್ತೇನೆ.

ಇರ್ಫಾನ್.ಕೆ
(ಅಧ್ಯಕ್ಷರು ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜು ಸಿಂಧನೂರು)

Leave a Reply

Your email address will not be published. Required fields are marked *