ಅರಕೇರಾ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಹಿರಿಯ ಹೋರಾಟಗಾರರಾದ ಟಿ.ಎ. ನಾರಾಯಣಗೌಡರ 60ನೇ ಹುಟ್ಟು ಹಬ್ಬದ ಪ್ರಯುಕ್ತ
ರೋಗಿಗಳಿಗೆ ಹಣ್ಣು-ಹಂಪಲು ಬ್ರೆಡ್ ಹಾಲು ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಅರಕೇರಾ ತಾಲೂಕು ಘಟಕದಿಂದ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಅರಕೇರಾ ತಾಲೂಕ ಅಧ್ಯಕ್ಷ ರಂಗಪ್ಪ ಗಾಲಿ ಸೇರಿದಂತೆ ಪದಾಧಿಕಾರಿಗಳು ನಗರ ಘಟಕದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರು ಕಾರ್ಯಕರ್ತರು ಭಾಗವಹಿಸಿದ್ದರು.

