ಮಸ್ಕಿ: ಕೆಲವರ ರಾಜಕೀಯ ದುರುದ್ದೇಶದಿಂದ ಸಮಾಜವನ್ನು ಬಲಿಪಶು ಮಾಡಲು ಹೊರಟಿದ್ದಾರೆಂದು ಆರ್.ಕೆ.ನಾಐಕ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಾಲ್ಮೀಕಿ ಭವನದಲ್ಲಿ ಸಮಾಜದ ಶಾಸಕ, ಮಾಜಿ ಶಾಸಕ ಸೇರಿದಂತೆ ಸಮಾಜದ ಮುಖಂಡರು ಸೇರಿಕೊಂಡು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕಾಧ್ಯಕ್ಷರನ್ನಾಗಿ ನೇಮಿಸಿದ್ದರೂ, ಆದರೆ ನನ್ನ ಅವಧಿ ಮುಗಿಯೂದರೊಳಗೆ ಕೆಲವರ ರಾಜಕೀಯ ದುರುದ್ದೇಶದಿಂದ ನನ್ನ ಗಮನಕ್ಕೆ ಬಾರದೇ ಬೇರೊಬ್ಬರನ್ನು ತಾಲೂಕಾಧ್ಯಕ್ಷರಾಗಿ ನೇಮಿಸಿದ್ದಾರೆ. ಆದರೆ ನನ್ನ ಅವಧಿ ಆಗಸ್ಟ್ವರೆಗೆ ಇದ್ದು, ತಾಲೂಕಾಧ್ಯಕ್ಷ ಬದಲಾವಣೆ ಮಾಡುವ ಬಗ್ಗೆ ಸ್ಥಳೀಯರಾಗಲಿ, ಜಿಲ್ಲಾಧ್ಯಕ್ಷರಾಗಲಿ ನನ್ನನ್ನು ಸಂಪರ್ಕಿಸಿಲ್ಲ. ರಾಜಕೀಯ ಪ್ರಭಾವ ಬಳಸಿಕೊಂಡು ತರಾತುರಿಯಲ್ಲಿ ಬೇರೊಬ್ಬರನ್ನು ನೇಮಿಸಿದ್ದಾರೆ. ನನ್ನ ರಾಜಿನಾಮೆ ಪಡೆಯದೇ ಬೇರೊಬ್ಬರನ್ನು ನೇಮಿಸಲು ಕಾರಣ ತಿಳಿಸಬೇಕು, ಹಾಲಿ ಅಧ್ಯಕ್ಷನಾಗಿರುವಾಗ ತರಾತುರಿಯಲ್ಲಿ ಬೇರೊಬ್ಬರನ್ನು ನೇಮಿಸಲು ಸಮಾಜದ ಮುಖಂಡರ ಸಭೆ ನಡೆಸಿದ್ದರಾ. ಸಮಾಜದ ಮುಖಂಡರ ಸಭೆ ನಡೆಸದೇ ಏಕಾಏಕಿ ತಾಲೂಕಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಬೇರೊಬ್ಬರನ್ನು ತಾಲೂಕಾಧ್ಯಕ್ಷರಾಗಿ ಮಾಡಿರುವುದರಿಂದ ಸಮಾಜವನ್ನು ಹೊಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು. 2-3 ದಿನದಲ್ಲಿ ಸಮಾಜದ ಮುಖಂಡರ ಸಭೆ ಕರೆದು ಸಭೆಯಲ್ಲಿ ನನ್ನ ತಪ್ಪುಗಳಿದ್ದರೇ ಎಲ್ಲಾರ ಸಮಕ್ಷಮದಲ್ಲಿ ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ನನ್ನ ತಪ್ಪುಗಳಿದ್ದರೇ ಕೂಡಲೇ ಸಮಾಜದ ಮುಖಂಡರಲ್ಲಿ ಕ್ಷೇಮೆಯಾಚಿಸಿ ತಾಲೂಕಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಮೌನೇಶ ನಗನೂರು, ಅಯ್ಯಪ್ಪ ನಾಯಕ, ಮಸ್ಕಿ, ಸಿದ್ದು ನಾಯಕ ಮೆದಿಕಿನಾಳ, ಜಮದಗ್ನಿ ಹಾಲಾಪೂರ, ನಾಗರಾಜ ಪರಾಪೂರು ಸೇರಿದಂತೆ ಇನ್ನಿತರಿದ್ದರು.

