ರಾಯಚೂರು ಜೂನ್ 10 (ಕರ್ನಾಟಕ ವಾರ್ತೆ): ರಾಯಚೂರು ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ 2026-27ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ವಹಣೆಯಾಗುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಪ್ರವೇಶಕ್ಕಾಗಿ ಎಸ್.ಹೆಚ್.ಪಿ ತಂತ್ರಾಂಶದಡಿ ವಸತಿ ನಿಲಯದ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು: ಹೊಸದಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಎಸ್.ಎಸ್.ಪಿ ಐಡಿ ಖಾತೆಯನ್ನು ಸೃಜನೆ ಮಾಡಿಕೊಳ್ಳಬೇಕು. ಎಸ್.ಎಸ್.ಪಿ ಐಡಿ ಖಾತೆಯನ್ನು ಸೃಜನೆ ಮಾಡಿಕೊಳ್ಳುವಾಗ ವಿದ್ಯಾರ್ಥಿಯು ಆಧಾರ್ ಕಾರ್ಡನ್ನು ಬಳಸಿಕೊಂಡು ಖಾತೆಯನ್ನು ಸೃಜನೆ ಮಾಡಿಕೊಳ್ಳುವುದು (ವಿದ್ಯಾರ್ಥಿಯ ಬ್ಯಾಂಕ್‌ಗೆ ಆಧಾರ್ ಕಾರ್ಡ್ ಸೀಡಿಂಗ್ ಆಗಿರಬೇಕು). ಎಸ್.ಎಸ್.ಪಿ. ವಿದ್ಯಾರ್ಥಿಯ ಐ.ಡಿ ಸಂಖ್ಯೆ (ನವೀಕರಣ ವಿದ್ಯಾರ್ಥಿಗಳಿಗೆ). ವಿದ್ಯಾರ್ಥಿ ಅಥವಾ ಪಾಲಕರ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ವಿದ್ಯಾರ್ಥಿಯ ಸಂಪೂರ್ಣ ವಿಳಾಸ ಹೊಂದಿರುಬೇಕು. ಆರ್.ಡಿ. ಸಂಖ್ಯೆ ಹೊಂದಿರುವ ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ(ಚಾಲ್ತಿ ಇರುವ) ಪ್ರತಿ. ಕಾಲೇಜಿನಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರ ಪ್ರತಿ. ಎಸ್.ಎಸ್.ಎಲ್.ಸಿ. ನೋಂದಣಿ ಸಂಖ್ಯೆ ಮತ್ತು ವಿಶ್ವವಿದ್ಯಾಲಯಗಳು ನೀಡುವ ನೋಂದಣಿ ಸಂಖ್ಯೆ ಹೊಂದಿರಬೇಕು. ಹಿಂದಿನ ಸಾಲಿನಲ್ಲಿ ತೇರ್ಗಡೆಯಾದ ಕೋರ್ಸುನ ಅಂಕಪಟ್ಟಿಯ ಪ್ರತಿ ಮತ್ತು ರಜಿಷ್ಟರ್ ಸಂಖ್ಯೆಯೊಂದಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಸತಿ ನಿಲಯ ಪ್ರವೇಶಕ್ಕಾಗಿ ವೆಬ್‌ಸೈಟ್ ವಿಳಾಸ: https://https://shp.karnataka.gov.in/ ನ್ನು ಸಂಪರ್ಕಿಸಿ ಅರ್ಜಿಯನ್ನು ಜೂನ್ 30ರೊಳಗಾಗಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080532-295603, 8762178819ಗೆ ಅಥವಾ ತಾಲೂಕಾ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ರಾಯಚೂರು ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ರುಕ್ಮಣೀ ಬಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *