ಕವಿತಾಳ: ಸಮೀಪದ ತೋರಣದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಕೊಠಡಿಯಲ್ಲಿ ಸೋಮವಾರ ಮಧ್ಯಾಹ್ನ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು ಅನಾಹುತ ತಪ್ಪಿದೆ.

ವೈದ್ಯರ ಕೊಠಡಿಯಲ್ಲಿ ಗೋಡೆಗೆ ಅಳವಡಿಸಿದ್ದ ಕೆಟ್ಟಿದ್ದ ಫ್ಯಾನ್ ಇದ್ದಕ್ಕಿದ್ದಂತೆ ಸ್ಪೋಟವಾಗಿ ಕೊಠಡಿಯಲ್ಲಿ ಬೆಂಕಿ ಆವರಿಸಿದೆ. ವೈದ್ಯರು ಕುಳಿತುಕೊಳ್ಳುವ ಕುರ್ಚಿ ಸಂಪೂರ್ಣ ಸುಟ್ಟಿದೆ.

ಬಿಸಿಲಿನ ತಾಪದಿಂದ ಎಕ್ಸಿಕ್ಯೂಟಿವ್ ಕುರ್ಚಿ ಬಿಟ್ಟು ವೈದ್ಯರು ಪಕ್ಕದಲ್ಲಿ ಮತ್ತೊಂದು ಕುರ್ಚಿಯಲ್ಲಿ ಕುಳಿತು ರೋಗಿಗಳ ತಪಾಸಣೆ ಮಾಡುತ್ತಿದ್ದರು ಎನ್ನಲಾಗಿದೆ. ಬೆಂಕಿ, ಹೊಗೆ ಆವರಿಸಿದ ಬೆನ್ನಲ್ಲೇ ರೋಗಿಗಳನ್ನು ಹೊರಗೆ ಕಳುಹಿಸಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಹೆಚ್ಚಿನ ಅನಾಹುತ ತಪ್ಪಿದೆ.

ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಸ್ಥಳೀಯ ಇಲೆಕ್ನಿಷಿಯನ್ ತಿಳಿಸಿದ್ದಾರೆ. ಫ್ಯಾನ್‌ನ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ವೈದ್ಯಾಧಿಕಾರಿ ಡಾ.ಪಿ.ಬಿ.ಸಿಂಗ್ ತಿಳಿಸಿದರು.

Leave a Reply

Your email address will not be published. Required fields are marked *