ಜಾಲಹಳ್ಳಿ : ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ “ಶಾಲಾ ಪ್ರಾರಂಭೋತ್ಸವ”, “ಮಹಾ ಪೋಷಕರ-ಶಿಕ್ಷಕರ ಸಭೆ” ಹಾಗೂ “ದಾಖಲಾತಿ ಆಂದೋಲನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಬೆಳಗ್ಗೆ 9:30 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
“ಉತ್ತಮ ಕಲಿಕೆ – ಉಜ್ವಲ ಭವಿಷ್ಯ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಉಚಿತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಶಾಲೆಯಲ್ಲಿ ನೀಡಲಾಗುವ ಪ್ರಮುಖ ಉಚಿತ ಸೌಲಭ್ಯಗಳು:
– ಸಂಪೂರ್ಣ ಉಚಿತ ಮತ್ತು ಕಡ್ಡಾಯ ಶಿಕ್ಷಣ
– ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ ಹಾಗೂ ಸಾಕ್ಸ್ ವಿತರಣೆ
– ಬಿಸಿ ಊಟದ ವ್ಯವಸ್ಥೆ ಹಾಗೂ ವಾರದಲ್ಲಿ 5 ದಿನ ಕ್ಷೀರಭಾಗ್ಯದ ಹಾಲು ವಿತರಣೆ
– ಉಚಿತ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ
– ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಮೌಲ್ಯ ಶಿಕ್ಷಣ ಪುಸ್ತಕ ವಿತರಣೆ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರೆಹಮಾನ್ ಖುರೇಷಿ ಮಾತನಾಡಿ, ಶಾಲೆಯ ಮೂಲಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟ ಕುರಿತು ಮಾಹಿತಿ ನೀಡಿದರು.
ಶಾಲೆಯ ವಿಶೇಷತೆಗಳು:
– ಪ್ರತಿ ತರಗತಿಗೂ ಪ್ರತ್ಯೇಕ ಕೊಠಡಿ, ಆಸನ ವ್ಯವಸ್ಥೆ
– ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯ
– ವಿಶಾಲ ಆಟದ ಮೈದಾನ ಮತ್ತು ಕ್ರೀಡಾ ಸಾಮಗ್ರಿಗಳು
– ಅನುಭವಿ ಹಾಗೂ ಅರ್ಹ ಶಿಕ್ಷಕ ವೃಂದ
– ಉತ್ತಮ ಎಸ್‌ಡಿಎಂಸಿ ಸಮಿತಿ
– FLN, CCE ಮತ್ತು LBA ಆಧಾರಿತ ಚಟುವಟಿಕೆಮೂಲಕ ಬೋಧನೆ
– ಕ್ರೀಡಾಕೂಟ, ಪ್ರತಿಭಾ ಕಾರಂಜಿ, ಕ್ಷೇತ್ರ ಭೇಟಿ ಹಾಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳು
ಗ್ರಾಮದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಉರ್ದು ಶಾಲೆಗೆ ದಾಖಲಿಸಿ ಸರ್ಕಾರದ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಲಾ ಮಂಡಳಿ ಮನವಿ ಮಾಡಿತು.
ಕಾರ್ಯಕ್ರಮದಲ್ಲಿ ನೂತನವಾಗಿಸಿಂದಗಿ ತಾಲೂಕಿನ ಥಾಂಬಾ ಗ್ರಾಮದಿಂದ ವರ್ಗಾವಣೆಯಾಗಿ ಜಾಲಹಳ್ಳಿ ಗ್ರಾಮಕ್ಕೆ ಆಗಮಿಸಿದ ಮುಖ್ಯಗುರುಗಳಾದ md ಇಬ್ರಾಹಿಂ ಸಾಬ್ ಅವರನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ನೂರುಲ್ ಹುಸೇನ್ ಆರ್ತಿ ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ನೂರುಲ್ ಹುಸೇನ್ ಆರ್ತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೂತನ ಮುಖ್ಯಗುರು md, ಇಬ್ರಾಹಿಂ ಸಾಬ್ ಭಾಗವಹಿಸಿದ್ದರು.
ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರೆಹಮಾನ್ ಖುರೇಷಿ, ಮೌಲಾನ ಅಶ್ರಫ್, ಜಹೀರ್ ಧರವೇಶ್ ಹಾಗೂ ಅಶ್‌ಪಾಕ್ ಮುಲ್ಲಾ ಉಪಸ್ಥಿತರಿದ್ದರು.


