ರಾಯಚೂರು ಏಪ್ರಿಲ್ 17 (ಕರ್ನಾಟಕ ವಾರ್ತೆ): ಜಿಲ್ಲಾ ಬಾಲ ಭವನ ರಾಯಚೂರು ವತಿಯಿಂದ 2026-27ನೇ ಸಾಲಿನ 05 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಯೋಗ, ಮೆಹಂದಿ, ಸಂಗೀತ, ಸಾಮೂಹಿಕ ನೃತ್ಯ, ಚಿತ್ರಕಲೆ, ಕರ ಕುಶಲಕಲೆ ಬೇಸಿಗೆ ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.
ಕಾರ್ಯಕ್ರಮಗಳು ದಿನಾಂಕ: 21-04-2026 ರಿಂದ 06-05-2026ರವರೆಗೆ 15 ದಿನಗಳ ಕಾಲ ಬೆಳಗ್ಗೆ 10ಗಂಟೆಗೆ ರಾಯಚೂರು ತಾಲೂಕಿನ ಕಲವಲದೊಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮಾಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
