ತಾಳಿಕೋಟೆ: ನಲವಡೆ ಕುಟುಂಭದ ವತಿಯಿಂದ ಮಂಗಳವಾರರಂದು ಪುತ್ರ ಸಾಯಿಸಮರ್ಥನ ೯ನೇ ವರ್ಷದ ಜನ್ಮದಿನದ ಅಂಗವಾಗಿ ಆಸ್ಪತ್ರೆಗಳಲ್ಲಿನ ಬಡ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವದರೊಂದಿಗೆ ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮದ ಜಾಗೃತಿ ಕಾರ್ಯವನ್ನು ಮಾಡಿದ್ದಾರೆ.
ಪಟ್ಟಣದ ಸಮೂದಾಯ ಆರೋಗ್ಯ ಕೇಂದ್ರದಲ್ಲಿನ ಬಡ ರೋಗಿಗಳಿಗೆ ಬ್ರೇಡ್, ಬೀಸ್ಕಿತ್, ಹಣ್ಣು ಹಂಪಲುಗಳನ್ನು ವಿತರಿಸಿದ ಹಣಮಂತ ನಲವಡೆ ಕುಟುಂಭದವರು ರೋಗಿಗಳೊಂದಿಗೆ ಕುಷಲೋಪಚಾರವನ್ನು ಗೈದರು.
ಈ ಸಮಯದಲ್ಲಿ ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಅವರು ಮಾತನಾಡಿ ಜನ್ಮ ದಿನದ ಅಂಗವಾಗಿ ಕೇಕ್ ಕತ್ತರಿಸಿ ಬರ್ತಡೆ ಪಾರ್ಟಿ ಎಂಬ ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸುತ್ತಿರುವ ಇಂದಿನ ದಿನಮಾನದಲ್ಲಿ ಹಣಮಂತ ನಲವಡೆ ಕುಟುಂಭದ ಬಾಂದವರು ತಾಳಿಕೋಟೆಯ ಸಮೂದಾಯ ಆರೋಗ್ಯ ಕೇಂದ್ರಕ್ಕೆ ಬೆಟ್ಟಿ ನೀಡಿ ಬಡ ರೋಗಿಗಳಿಗೆ ಹಣ್ಣು ಹಂಪುಗಳನ್ನು ನೀಡಿ ರೋಗಿಗಳಿಗೆ ಚೇತರಿಕೆ ಮತ್ತು ಸಾಂತ್ವನ ನೀಡುವಂತಹ ಕಾರ್ಯ ಮಾಡಿರುವದು ಶ್ಲಾಘನೀಯವಾಗಿದೆ. ರೋಗಿಗಳಿಗೆ ಪೌಷ್ಟಿಕಾಂಶದ ಹಣ್ಣು ಹಂಪಲು ಆಹಾರ ಒದಗಿಸುವದರೊಂದಿಗೆ ರೋಗಿಗಳಲ್ಲಿ ಹೊಸ ಚೈತನ್ಯ ಮೂಡಲಿದೆ ಇಂತಹ ಕಾರ್ಯಕ್ರಮಗಳು ರೋಗಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ಸಮಾಜದೊಂದಿಗೆ ಬೆರೆಯಲು ಸಹಾಯ ಮಾಡುತ್ತವೆ. ಇದರ ಜೊತೆಗೆ ಪರಿಸರ ಪೂರಕವಾದ ಪ್ರೇಮತ್ವವನ್ನು ಮಕ್ಕಳಲ್ಲಿ ಬೆಳೆಸಲು ಸಸಿ ನಡುವ ಕಾರ್ಯಕ್ರಮ ಹಮ್ಮಿಕೊಂಡಿರುವದು ಗುಣಗಾನಮಯವಾಗಿದೆ ಎಂದರು.ಈ ಸಮಯದಲ್ಲಿ ಡಾ.ವಿಜಯಲಕ್ಷ್ಮೀ ಹಜೇರಿ, ಡಾ.ಮಧು ಅಗರವಾಲಾ, ಹಣಮಂತ ನಲವಡೆ, ಶ್ರೀಮತಿ ಭಾರತಿ(ಸ್ನೇಹಾ) ನಲವಡೆ, ಜಿ.ಟಿ.ಘೋರ್ಪಡೆ, ರಾಘವೇಂದ್ರ ನಲವಡೆ, ರಾಜಶೇಖರ ಮ್ಯಾಗೇರಿ, ಅಂಬಾಜಿ ಘೋರ್ಪಡೆ, ಪ್ರಾರ್ಥನಾ ನಲವಡೆ, ಭೂಮಿಕಾ ಘೋರ್ಪಡೆ, ಪ್ರವೀಣ್ ಘೋರ್ಪಡೆ, ಮಾರುತಿ ಕಾಸೇದ, ರಣಜಿತ್‌ಸಿಂಹ್ ಘೋರ್ಪಡೆ, ಗಂಗಾ ಘೋರ್ಪಡೆ, ವಿಜಯಸಿಂಹ್ ಘೋರ್ಪಡೆ, ಅದ್ವಿತಾ ಘೋರ್ಪಡೆ, ಅವಂತಿಕಾ ಘೋರ್ಪಡೆ, ಮೊದಲಾದವರು ಉಪಸ್ಥಿತರಿದ್ದರು.
ಫೋಟೋ: ತಾಳಿಕೋಟೆ : ಪಟ್ಟಣದ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ನಲವಡೆ ಕುಟುಂಭದ ವತಿಯಿಂದ ಸಾಯಿಸರ್ಮರ್ಥ ನಲವಡೆ ಜನ್ಮದಿನದ ಅಂಗವಾಗಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

