ತಾಳಿಕೋಟಿ: ಬೇಸಿಗೆ ಸಮೀಪಿಸುತ್ತಿದ್ದಂತೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ಈ ಸಮಸ್ಯೆ ಕೇವಲ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳೂ ಎದುರಿಸುತ್ತವೆ. ಅದರಲ್ಲೂ ವನ್ಯಜೀವಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತವೆ.ಈ ಹಿನ್ನೆಲೆಯಲ್ಲಿ ಬಸವ ಚೇತನ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ವನ್ಯಜೀವಿಗಳಿಗೆ ಕುಡಿಯವ ನೀರಿನ ವ್ಯವಸ್ಥೆ ಮಾಡಿದ್ದು, ತನ್ನ ವ್ಯಾಪ್ತಿಯಲ್ಲಿ ಬರುವ ಅನೇಕ ಕಡೆ ಹೊಲಗಳನ್ನು ಗುರುತಿಸಿ ಅರವಟ್ಟಿಗೆ ಕಾರ್ಯ ಆರಂಭಿಸಿದೆ. ಈ ಸಂಘದ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಬೇಸಿಗೆಯ ಬಿಸಿಲಿನಿಂದಾಗಿ ಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಿದು. ಅವುಗಳ ರಕ್ಷಣೆಗಾಗಿ ಸಾರ್ವಜನಿಕರು ಮನೆಗಳ ಮೇಲೆ ಗಿಡಮರಗಳ ಅಡಿಯಲ್ಲಿ ನೀರಿನ ಅರವಟ್ಟಿಗೆ ಅಥವಾ ಪಾತ್ರೆಗಳನ್ನು ಇಟ್ಟು ನೀರುಡಿಸುವಂತೆ ಜಾಗೃತಿ ಮೂಡಿಸಲಾಗಿದೆ ಮೂಕ ಪ್ರಾಣಿ ಪಕ್ಷಿಗಳು ದಾಹ ತಣಿಸಲು ಈ ಮಾನವೀಯ ಕಾರ್ಯವು ಮುಖ್ಯವಾಗಿದೆ ಎಂದು ಶ್ರೀ ಬಸವಚೇತನ ಗ್ರಾಮೀಣ ಅಭಿವೃದ್ಧಿ ಸಂಘವು ಶ್ರೀ ಬಸವ ಗೋಶಾಲೆ ಗೋ ರಕ್ಷಾ ಕೇಂದ್ರ ಈ ಕಾರ್ಯ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಸಂಘದ ಸಂಗಮೇಶ ಎಸ್.ಹರನಾಳ, ಕಾರ್ಯದರ್ಶಿ ಗುರುರಾಜ ಕಾಜಗಾರ, ಪದಾಧಿಕಾರಿಗಳಾದ ಗೌಡಪ್ಪಗೌಡ ಬಿರಾದಾರ, ಮುತ್ತು ವಡ್ಡೋಡಗಿ, ಕುಮಾರ್ ಹರನಾಳ, ವಿಜಯಕುಮಾರ ಸಾಸನೂರ, ರಮೇಶ ಹರವಾಳ ಹಾಗೂ ಸಂಗಡಿಗರು ಇದ್ದರು.

