ಉಡುಪಿ ಅಧೋಕ್ಷಜಮಠ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಹಾಗೂ ತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಗುರುವಾರ ವಸಂತ ಧಾರ್ಮಿಕ ಶಿಬಿರ ಆರಂಭಗೊಂಡಿದೆ ಎಂದು ಪಂಡಿತ ರಾಮಕೃಷ್ಣ ಆಚಾರ್ಯ ಗೋನವಾರ ಹೇಳಿದರು.
ನಗರದ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ವಸಂತ ಧಾರ್ಮಿಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಮಹಿಳೆಯರು ಹಾಗೂ ಮಕ್ಕಳಿಗೆ ಬೇರೆ ಬೇರೆ ಶಿಕ್ಷಣ ನೀಡಲಾಗುತ್ತಿದೆ. ಸುಮಾರು 35 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ ಎಂದರು.
ನಂತರ ಸಾಲಗುಂದದ ರಂಗನಾಥ ಆಚಾರ್ಯರು ಮಾತನಾಡಿ, ಶಿಬಿರಾರ್ಥಿಗಳಿಗೆ ನಿತ್ಯಸ್ತೋತ್ರ, ನಿತ್ಯಾನುಷ್ಠಾನ, ರಾಮಾಯಣ-ಮಹಾಭಾರತದ ಪುರಾಣ ಕಥೆಗಳು, ಬೌದ್ಧಿಕ ಕ್ರೀಡೆಗಳು, ಸಂಕೀರ್ತನೆ, ಹಾಗೂ ಹಬ್ಬಗಳ ಆಚರಣೆಯ ಮಹತ್ವವನ್ನು ತಿಳಿಸಲಾಗುವುದು ಎಂದು ವಿವರಿಸಿ ಈ ವಿಶೇಷ ಶಿಬಿರವನ್ನು ಗೋವಿಂದಾಚಾರ್ಯ ಮಠಾಧಿಕಾರಿ, ವಿಷ್ಣು ಕುಲಕರ್ಣಿ, ಶ್ರೀರಾಮ ಕುಲಕರ್ಣಿ, ಶ್ರೀ ಹರಿ, ಸಾಗರ ಅವರು ನಿರ್ವಹಣೆ ಮಾಡುತ್ತಿದ್ದಾರೆ ಎಂದರು.

