ರಾಯಚೂರು ಏಪ್ರಿಲ್ 16 (ಕರ್ನಾಟಕ ವಾರ್ತೆ): ಜಿಲ್ಲೆಯ ಅರಕೇರಾ ತಾಲೂಕಿನ ಕೊತ್ತದೊಡ್ಡಿಯ ಏಕಲವ್ಯ ಮಾದರಿ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕನ್ನಡ ಶಿಕ್ಷಕರ 01ಹುದ್ದೆಗೆ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಶೈಕ್ಷಣಿಕ ಅರ್ಹತೆ ಹೊಂದಿರುವ 40ವರ್ಷದೊಳಗಿನ ಅಭ್ಯರ್ಥಿಗಳಿಗೆ 35 ಸಾವಿರ ರೂ. ವೇತನ ನೀಡಲಾಗುವುದು. ಕಂಪ್ಯೂmರ್ ವಿಜ್ಞಾನ, ಮಹಿಳಾ ಕ್ರೀಡಾ ತರಭೇತುದಾರರು, ಸಂಗೀತ ಶಿಕ್ಷಕರ ತಲಾ 01 ಹುದ್ದೆಗೆ ಸಂಬಧಿತ ಸ್ನಾತಕ ಪದವಿ ಮತ್ತು ಬಿ.ಎಡ್ ಶೈಕ್ಷಣಿಕ ಅರ್ಹತೆ ಹೊಂದಿರುವ 35ವರ್ಷದೊಳಗಿನ ಅಭ್ಯರ್ಥಿಗಳಿಗೆ 33 ಸಾವಿರ ರೂ. ವೇತನ ನೀಡಲಾಗುವುದು. ಶೈಕ್ಷಣಿಕ ಸಲಹೆಗಾರ 01 ಹುದ್ದೆಗೆ ಮನೋವಿಜ್ಞಾನದಲ್ಲಿ / ಕ್ಲಿನಿಕಲ್ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರುವ 30ವರ್ಷದೊಳಗಿನ ಅಭ್ಯರ್ಥಿಗಳಿಗೆ 35,400 ರೂ. ವೇತನ ನೀಡಲಾಗುವುದು. ಸ್ಟಾಫ್ ನರ್ಸ್ 01 ಹುದ್ದೆಗೆ ಬಿ.ಎಸ್ಸಿ. ನರ್ಸಿಂಗ್/ ಡಿಪ್ಲೊಮಾ ಇನ್ ಜಿ.ಎನ್.ಎಂ ಪದವಿ ಪಡೆದ 35 ವರ್ಷದೊಳಗಿನ ಅಭ್ಯರ್ಥಿಗಳಿಗೆ 29,200 ರೂ. ವೇತನ ನೀಡಲಾಗುವುದು. ಕ್ಯಾಟರಿಂಗ್ ಅಸಿಸ್ಟೆಂಟ್ 01ಹುದ್ದೆಗೆ ಹೋಟೆಲ್ ಮ್ಯಾನೆಜ್‌ಮೆಂಟ್/ ಕ್ಯಾಟರಿಂಗ್/ ಹಾಸ್ಪಿಟಾಲಿಟಿ ವಿಷಯಗಳಲ್ಲಿ ಮೂರು ವರ್ಷಗಳ ಪದವಿ ಪಡೆದ 35 ವರ್ಷದೊಳಗಿನ ಅಭ್ಯರ್ಥಿಗಳಿಗೆ 25,200 ರೂ. ವೇತನ ನೀಡಲಾಗುವುದು. ಎಲೆಕ್ಟಿçಷಿಯನ್ ಕಂ. ಪ್ಲಂಬರ್ 01 ಹುದ್ದೆಗೆ 10ನೇ ತರಗತಿ + ಐ.ಟಿ.ಐ. ಅಥವಾ ಡಿಪ್ಲೋಮಾ ಪಡೆದ 45 ವರ್ಷದೊಳಗಿನ ಅಭ್ಯರ್ಥಿಗಳಿಗೆ 19.900 ರೂ. ವೇತನ ನೀಡಲಾಗುವುದು. ಹೆಡ್ ಕುಕ್- ಮುಖ್ಯ ಅಡುಗೆಗಾರರು (ಪುರುಷ) 01 ಹುದ್ದೆಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 35ವರ್ಷದೊಳಗಿನ ಅಭ್ಯರ್ಥಿಗಳಿಗೆ 15,069 ರೂ. ವೇತನ ನೀಡಲಾಗುವುದು. ಅಡುಗೆ ಸಹಾಯಕರು (ಪುರುಷ) 02 ಹುದ್ದೆಗಳಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾದ 30 ವರ್ಷದೊಳಗಿನ ಅಭ್ಯರ್ಥಿಗಳಿಗೆ 14,069 ರೂ. ವೇತನ ನೀಡಲಾಗುವುದು. ಸೆಕ್ಯುರಿಟಿ ಗಾರ್ಡ್- ಭದ್ರತಾ ಸಿಬ್ಬಂದಿ 02ಹುದ್ದೆಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 30 ವರ್ಷದೊಳಗಿನ ಅಭ್ಯರ್ಥಿಗಳಿಗೆ 15 ಸಾವಿರ ರೂ. ವೇತನ ನೀಡಲಾಗುವುದು. ಗಾರ್ಡನರ್ 01 ಹುದ್ದೆಗೆ ಹಾಗೂ ಸ್ವೀಪರ್ 01ಹುದ್ದೆಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 30 ವರ್ಷದೊಳಗಿನ ಅಭ್ಯರ್ಥಿಗಳಿಗೆ 15 ಸಾವಿರ ರೂ. ವೇತನ ನೀಡಲಾಗುವುದು.

ಆಸಕ್ತಿಯುಳ್ಳವರು ಇತ್ತೀಚಿನ ವೈಯಕ್ತಿಕ ವಿವರಗಳೊಂದಿಗೆ (ಒಂದು ಇತ್ತೀಚಿನ ಭಾವಚಿತ್ರ) ತಮ್ಮ ವಿದ್ಯಾಭ್ಯಾಸದ ಒಂದು ಸೆಟ್ ನಕಲು ಪ್ರತಿಯನ್ನು ಏಪ್ರಿಲ್ 23ರೊಳಗಾಗಿ ಅರ್ಜಿಯನ್ನು ಸಲ್ಲಿಸಿ, ಏಪ್ರಿಲ್ 28ರಂದು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಏಕಲವ್ಯ ಮಾದರಿ ವಸತಿ ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಕುಮಾರ್ ವರ್ಮ, ಮೊ.ಸಂ. 6306092667 ಅಥವಾ ಇಂಗ್ಲೀಷ್ ಶಿಕ್ಷಕರರಾದ ರವಿಕುಮಾರ್ ಜಿ. ಮೊ. ಸಂಖ್ಯೆ: 7090104974ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *