ಲಿಂಗಸಗೂರು : ಏ 10 . ಪಟ್ಟಣದ ಉಮಾ ಮಹೇಶ್ವರಿ ಕಾಲೇಜಿನ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತಿದ್ದ ಕುಮಾರಿ ಸಂಗೀತಾ ಆರ್ ಮಾಣಿಕ್ ಇವರು 600 ಅಂಕ ಕ್ಕೆ 506 ಅಂಕಗಳನ್ನು ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.
ಪತ್ರಕರ್ತ ರಾಜೇಶ್ ಮಾಣಿಕ್ ರವರ ಹಿರಿಯ ಸುಪುತ್ರಿ ಯ ಸಾಧನೆಗೆ ಪಾಲಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ಕಸಬಾ ಲಿಂಗಸಗೂರು ಗ್ರಾಮದಲ್ಲಿ ಇದ್ದುಕೊಂಡು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿ 506 ಅಂಕಗಳು ತೆಗೆದುಕೊಂಡಿದ್ದು,ನಿತ್ಯ ಅಭ್ಯಾಸದಲ್ಲಿ ತೊಡಗಿರುವುದರಿಂದ ಸಾಧನೆ ಮಾಡಿದ್ದಾಳೆ ಎಂದು ತಂದೆ ಪತ್ರಕರ್ತರ ರಾಜೇಶ್ ಮಾಣಿಕ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ವಿದ್ಯಾರ್ಥಿನಿಯ ಸಾಧನೆಯಿಂದ ಕಾಲೇಜಿಗೂ ಹಾಗೂ ಕುಟುಂಬಕ್ಕೂ ಒಳ್ಳೆಯ ಕೀರ್ತಿ ತಂದಿದ್ದಾಳೆಂದು
ಉಮಾ ಮಹೇಶ್ವರಿ ಕಾಲೇಜಿನ ಅಡಳಿತಾಧಿಕಾರಿ ವಿನಯಕುಮಾರ ಗಣಚಾರಿ,ಕಾಲೇಜಿನ ಪ್ರಾಂಶಪಾಲರು ಜಿ.ವಿ.ಸುರೇಶ ಸೇರಿ ಹಲವರು ಅಭಿನಂದನೆ ತಿಳಿಸಿದ್ದಾರೆ.
