ಮಾನ್ವಿ ಎ 09 : ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಮಾನ್ವಿ ತಾಲೂಕಿನ ಪ್ರತಿಷ್ಠಿತ ‘ಸರ್ವೋದಯ ಪಿಯು ಕಾಲೇಜು’ ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ತಾಲೂಕು ಮಟ್ಟದಲ್ಲಿಯೇ ಪ್ರಥಮ ಸ್ಥಾನ ಪಡೆದು ಅಪೂರ್ವ ಸಾಧನೆಗೈದಿದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಈ ಕಾಲೇಜು, ಪ್ರತಿ ವರ್ಷದಂತೆ ಈ ಬಾರಿಯೂ ತನ್ನ ಶೈಕ್ಷಣಿಕ ಮೇಲುಗೈಯನ್ನು ಸಾಧಿಸಿ, ತಾಲೂಕಿನ ಶೈಕ್ಷಣಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಗಮನಾರ್ಹ ಫಲಿತಾಂಶ: ಡಿಸ್ಟಿಂಕ್ಷನ್‌ನಲ್ಲಿ 30 ವಿದ್ಯಾರ್ಥಿಗಳು:
ಕಾಲೇಜಿನ ಒಟ್ಟು ಫಲಿತಾಂಶ ಅತ್ಯಂತ ವಿಶಿಷ್ಟವಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಪೈಕಿ ಬರೋಬ್ಬರಿ 30 ವಿದ್ಯಾರ್ಥಿಗಳು ‘ಡಿಸ್ಟಿಂಕ್ಷನ್’ (ಅತ್ಯುನ್ನತ ಶ್ರೇಣಿ) ನಲ್ಲಿ ತೇರ್ಗಡೆಯಾಗಿದ್ದಾರೆ. 66 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಶ್ರದ್ಧೆ, ಪೋಷಕರ ನಿರಂತರ ಪ್ರೋತ್ಸಾಹ ಹಾಗೂ ಉಪನ್ಯಾಸಕರ ಸಮರ್ಪಿತ ಬೋಧನೆಯೇ ಈ ಅದ್ಭುತ ಸಾಧನೆಗೆ ಮುಖ್ಯ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಯಶಸ್ಸಿನ ಗುಟ್ಟು: ಗುಣಮಟ್ಟದ ಶಿಕ್ಷಣ ಮತ್ತು ನಿರಂತರ ಮಾರ್ಗದರ್ಶನ:
ಸರ್ವೋದಯ ಪಿಯು ಕಾಲೇಜಿನ ಈ ಯಶಸ್ಸು ಕೇವಲ ಕಾಕತಾಳೀಯವಲ್ಲ. ವರ್ಷಪೂರ್ತಿ ನಡೆಯುವ ನಿಯಮಿತ ತರಗತಿಗಳು, ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ವಿಶೇಷ ತರಬೇತಿ ಶಿಬಿರಗಳು, ಹಾಗೂ ಪರೀಕ್ಷಾ ಭಯ ಹೋಗಲಾಡಿಸಲು ನಡೆಸುವ ಮಾದರಿ ಪರೀಕ್ಷೆಗಳು ಈ ಫಲಿತಾಂಶಕ್ಕೆ ಬುನಾದಿಯಾಗಿವೆ. ಪರೀಕ್ಷೆಗೆ ಮುನ್ನ ನಡೆದ ಪುನರವಲೋಕನ ತರಗತಿಗಳು (ಖevisioಟಿ ಅಟಚಿsses) ವಿದ್ಯಾರ್ಥಿಗಳಲ್ಲಿ ಅಪಾರ ಆತ್ಮವಿಶ್ವಾಸವನ್ನು ತುಂಬಿವೆ.
ಇಲ್ಲಿನ ಉಪನ್ಯಾಸಕ ವೃಂದವು ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ವಿಶೇಷ ಗಮನ ಹರಿಸುತ್ತದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ದುರ್ಬಲ ವಿಷಯಗಳಲ್ಲಿ ಹೆಚ್ಚುವರಿ ತರಬೇತಿ ನೀಡುವ ಮೂಲಕ ಪ್ರತಿಯೊಬ್ಬರೂ ಯಶಸ್ಸಿನ ಮೆಟ್ಟಿಲೇರುವಂತೆ ನೋಡಿಕೊಳ್ಳಲಾಗಿದೆ.
ತಾಲೂಕಿಗೆ ಕೀರ್ತಿ ತಂದ ಟಾಪರ್ ಮಾಯನ ಅಂಜುಮ್:
ಈ ವರ್ಷದ ಫಲಿತಾಂಶದ ಪ್ರಮುಖ ಆಕರ್ಷಣೆಯಾಗಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ಮಾಯನ ಅಂಜುಮ್ (ತಂದೆ. ಮೊಹಮ್ಮದ್ ಯೂಸುಫ್) ಹೊರಹೊಮ್ಮಿದ್ದಾರೆ. ಒಟ್ಟು 600 ಅಂಕಗಳಿಗೆ 581 ಅಂಕಗಳನ್ನು (96.8%) ಪಡೆಯುವ ಮೂಲಕ ತಾಲೂಕು ಮಟ್ಟದಲ್ಲಿಯೇ ಪ್ರಥಮ ಸ್ಥಾನ ಗಳಿಸಿ ಕಾಲೇಜಿನ ಹಾಗೂ ಪೋಷಕರ ಕೀರ್ತಿಯನ್ನು ಪತಾಕೆಯಂತೆ ಹಾರಿಸಿದ್ದಾರೆ. ಇವರ ಈ ಅಸಾಧಾರಣ ಸಾಧನೆ ಮುಂಬರುವ ವಿದ್ಯಾರ್ಥಿಗಳಿಗೆ ಬಹುದೊಡ್ಡ ಪ್ರೇರಣೆಯಾಗಿದ್ದು, ಸರ್ವೋದಯ ಕಾಲೇಜಿನ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಮೈಲುಗಲ್ಲಾಗಿ ದಾಖಲಾಗಿದೆ.
ತಾಲೂಕಿನಲ್ಲಿ ‘ಫಸ್ಟ್ ಕಾಲೇಜ್’ ಎಂಬ ಹೆಗ್ಗಳಿಕೆ:
ಸತತವಾಗಿ ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಸರ್ವೋದಯ ಪಿಯು ಕಾಲೇಜ್, ಈ ಬಾರಿಯ ಫಲಿತಾಂಶ
ಮಾನ್ವಿಯ ಸರ್ವೋದಯ ಪಿಯು ಕಾಲೇಜಿಗೆ ಭರ್ಜರಿ ಫಲಿತಾಂಶ
ತಾಲೂಕು ಫಸ್ಟ್ ಸಾಧನೆ, ಮಾಯನ ಅಂಜುಮ್ ತಾಲೂಕು ಟಾಪರ್ ಡಿಸ್ಟಿಂಕ್ಷನ್ 30 | ಫಸ್ಟ್ ಕ್ಲಾಸ್ 66 | ಸೆಕಂಡ್ ಕ್ಲಾಸ್ 13 | ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಫಲಿತಾಂಶ
ಮಾನ್ವಿ ತಾಲೂಕಿನಲ್ಲಿಯೇ “ಫಸ್ಟ್ ಕಾಲೇಜ್” ಎಂಬ ಗೌರವಕ್ಕೆ ಪಾತ್ರವಾಗಿದೆ. ಕೇವಲ ಮಾನ್ವಿ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳಿಗೂ ಹಾಗೂ ಪೋಷಕರಿಗೂ ಇದೀಗ ಸರ್ವೋದಯ ಕಾಲೇಜು ಮೊದಲ ಆಯ್ಕೆಯಾಗಿ ಪರಿಣಮಿಸಿದೆ. ಈ ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ತಾಲೂಕಿನಾದ್ಯಂತ ವಿಶೇಷ ಗಮನ ಸೆಳೆದಿದ್ದು, ಕಾಲೇಜು ನೀಡುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ.
ಕಾಲೇಜ್ ಆಡಳಿತ ಮಂಡಳಿಯ ಹರ್ಷ: “ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ನಮ್ಮ ಕಾಲೇಜಿನ ಆಡಳಿತ ಮಂಡಳಿ, ಬೋಧಕ ವರ್ಗ ಹಾಗೂ ಎಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಪೋಷಕರ ನಿರಂತರ ಬೆಂಬಲ ಮತ್ತು ನಮ್ಮ ಶಿಕ್ಷಕರ ನಿಸ್ವಾರ್ಥ ಸಮರ್ಪಣೆಯಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದಿನ ಶೈಕ್ಷಣಿಕ ವರ್ಷಗಳಲ್ಲೂ ಇದೇ ಹಾದಿಯಲ್ಲಿ ಸಾಗಿ, ಇನ್ನಷ್ಟು ಅತ್ಯುತ್ತಮ ಫಲಿತಾಂಶ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ.”
ಪೋಷಕರ ಪ್ರತಿಕ್ರಿಯೆಗಳು:
* “ನಮ್ಮ ಮಗಳು ತಾಲೂಕು ಮಟ್ಟದಲ್ಲಿಯೇ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನ ಬಹಳ ಉತ್ತಮವಾಗಿದ್ದರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು.”-ಮೊಹಮ್ಮದ್ ಯೂಸುಫ್ (ಟಾಪರ್ ಮಾಯನ ಅಂಜುಮ್ ತಂದೆ)
* “ಮಕ್ಕಳ ಸಾಧನೆ ನಮ್ಮ ಕುಟುಂಬಕ್ಕೆ ದೊಡ್ಡ ಹೆಮ್ಮೆ ತಂದಿದೆ. ಅವರ ಹಗಲಿರುಳಿನ ಕಠಿಣ ಪರಿಶ್ರಮಕ್ಕೆ ಸರ್ವೋದಯ ಕಾಲೇಜಿನಲ್ಲಿ ಸರಿಯಾದ ಫಲ ಮತ್ತು ಮಾರ್ಗದರ್ಶನ ಸಿಕ್ಕಿದೆ.” – ರಾಜಶೇಖರ್ (ವೇದಾವತಿ ತಂದೆ)
* “ಸರ್ವೋದಯ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಕೇವಲ ಪಠ್ಯವಲ್ಲದೆ, ಆತ್ಮವಿಶ್ವಾಸ ತುಂಬುವ ಅತ್ಯುತ್ತಮ ಶಿಕ್ಷಣ ನೀಡುತ್ತಿರುವುದರಿಂದಲೇ ನಮ್ಮ ಮಗಳು ಇಷ್ಟು ಉತ್ತಮ ಅಂಕಗಳನ್ನು ಗಳಿಸಿದ್ದಾನೆ.” -ನಿಂಗಪ್ಪ (ಪ್ರಿಯಾಂಕ ಹೊಸಮನಿ ತಂದೆ)
* “ನಮ್ಮ ಮಗ ಉತ್ತಮ ಅಂಕಗಳುನ್ನು ಗಳಿಸಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆಯ ಸಂಗತಿ. ಕಾಲೇಜಿನ ಶಿಕ್ಷಕರು ಮಾರ್ಗದರ್ಶನ ಮತ್ತು ಶಿಸ್ತಿನ ವಾತಾವರಣ ಇದಕ್ಕೆ ಪ್ರಮುಖ ಕಾರಣವಾಗಿದೆ.” -ಶೆಕ್ಸಾವಲಿ (ಎಮ್.ಡಿ ಕೈಸರ್ ತಂದೆ)
* ಸರ್ವೋದಯ ಪಿಯು ಕಾಲೇಜ್ ವಿದ್ಯಾರ್ಥಿಗಳು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮಾನ್ವಿಯ ಹೆಮ್ಮೆ ಹೆಚ್ಚಿಸಿದ್ದಾರೆ. ಈ ಸಾಧನೆಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕಾಲೇಜಿನ ನಿರ್ವಹಣಾ ಮಂಡಳಿಯ ಸಮರ್ಪಿತ ಪ್ರಯತ್ನ ಕಾರಣವಾಗಿದೆ. ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಇಂತಹ ಫಲಿತಾಂಶಗಳು ನಮ್ಮ ಪ್ರದೇಶದ ಶಿಕ್ಷಣ ಮಟ್ಟವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತವೆ.”
– ಮಾನ್ವಿ ಶಾಸಕರು

ಮಾಯನ ಅಂಜುಮ್ -581 (96.8%)

ವೇದಾವತಿ (ತಂದೆ: ರಾಜಶೇಖರ್) – 580 (96.6%)

ಪ್ರಿಯಾಂಕ (ತಂದೆ: ನಿಂಗಪ್ಪ) – 579 (96.5%)

ಕೈಸರ್ (ತಂದೆ: ಸೆಕ್ಸಾವಲಿ) – 575 (95.8%)
ಸಿಂಧೂ ಎನ್. (ತಂದೆ: ನೂರುಸ) – 570 (95%)

ರಾಜು (ತಂದೆ: ಸಾಬಣ್ಣ) – 569 (94.8%)

ಯಶ್ವಂತ್ (ತಂದೆ: ಅಮರೇಶ್) – 568 (94.6%)

ಎಂ.ಡಿ. ಮಕ್ಸುದ್ (ತಂದೆ: ಎಂ.ಡಿ. ಮೊಹಮ್ಮದ್) 566 (94%)
