ಮಾನ್ವಿ : ನಮ್ಮ ಮಾನ್ವಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ 2025-26ನೇ ಸಾಲಿನ ಹಣಕಾಸು ವರದಿ ಪ್ರಕಟಗೊಂಡಿದ್ದು, ಸಂಘವು ₹58,57,751.48/- ನಿವ್ವಳ ಲಾಭ ದಾಖಲಿಸಿರುವುದು ಗಮನಾರ್ಹ ಸಾಧನೆ ಎಂದು ಅಧ್ಯಕ್ಷ ಹೆಚ್. ಮೌನೇಶಗೌಡ ಹೇಳಿದರು. ಸದಸ್ಯರ ವಿಶ್ವಾಸ ಮತ್ತು ಸಮರ್ಪಿತ ನಿರ್ವಹಣೆಯಿಂದ ಸಂಘವು ನಿರಂತರವಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಹೇಳಿದರು.
ಸಂಘದ ಹಣಕಾಸು ವಿವರಗಳ ಪ್ರಕಾರ, ಶೇರು ಬಂಡವಾಳ ₹38,85,200/- ಆಗಿದ್ದು, ಠೇವಣಿಗಳು ₹12,09,95,654.63/-ಕ್ಕೆ ಏರಿಕೆಯಾಗಿದೆ. ಹೂಡಿಕೆಗಳು ₹4,16,42,389.82/- ಆಗಿದ್ದು, ರಿಸರ್ವ್ ನಿಧಿ ₹2,01,23,424.74/- ಆಗಿದೆ. ಸಾಲ ಮತ್ತು ಮುಂಗಡ ₹10,22,05,984/- ಹಾಗೂ ಕಾರ್ಯನಿಧಿ ₹14,56,52,327.38/- ಆಗಿದ್ದು, ಸಂಘದ ಆರ್ಥಿಕ ಸ್ಥಿತಿ ಬಲವಾಗಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಸಿಬ್ಬಂದಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *