ರಾಯಚೂರು ಏಪ್ರಿಲ್ 07 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನೂತನವಾಗಿ ನಿರ್ಮಾಣಗೊಂಡ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ರೋಷ್ಟರ್ ಮತು ಮೇರಿಟ್ ಆಧರಿಸಿ ಎನ್.ಹೆಚ್.ಎಮ್ ನಿಬಂಧನೆಗೊಳಪಟ್ಟು ಆರ್ಹ ಆಭ್ಯರ್ಥಿಗಳಿಂದ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಸ್ತ್ರೀರೋಗ ತಜ್ಞ 01 ಹುದ್ದೆಗೆ ಎಂ.ಬಿ.ಬಿ.ಎಸ್. ಎಂ.ಎಸ್ ಓಬಿಜಿ ವಿದ್ಯಾರ್ಹತೆ ಹೊಂದಿರಬೇಕು. 45 ವರ್ಷದೊಳಗಿರಬೇಕು. ಜನರಲ್ ಮೆಡಿಸಿನ್ 01 ಹುದ್ದೆಗೆ ಎಂ.ಬಿ.ಬಿ.ಎಸ್ ಡಿ.ಸಿ.ಹೆಚ್, ಎಂ.ಡಿ ಪೀಡಿಯಾಟ್ರಿಕ್, ಡಿಎನ್ ಬಿ ಪೀಡಿಯಾಟ್ರಿಕ್ ವಿದ್ಯಾರ್ಹತೆ ಹೊದಿರಬೇಕು. 45 ವರ್ಷದೊಳಗಿರಬೇಕು. ವೈದ್ಯಾಧಿಕಾರಿ 03 ಹುದ್ದೆಗೆ ಎಂ.ಬಿ.ಬಿ.ಎಸ್ ವಿದ್ಯಾರ್ಹತೆ ಹೊಂದಿರಬೇಕು. 45 ವರ್ಷದೊಳಗಿರಬೇಕು. ಈ ಹುದ್ದೆಗಳಿಗೆ ಎನ್.ಹೆಚ್.ಎಂ ಮಾರ್ಗಸೂಚಿಗಳ ಪ್ರಕಾರ ದಿನಾಂಕ: 10-04-2026 ರಂದು ವಾಕ್-ಇನ್ ಸಂದರ್ಶನ ನಡೆಸಲಾಗುವುದು.
ಸ್ಟಾಫ್ ನರ್ಸ್ 28 ಹುದ್ದೆಗಳಿಗೆ ಜಿ.ಎನ್.ಎಂ ಅಥವಾ ಬಿ.ಎಸ್.ಸಿ ನರ್ಸಿಂಗ್ + 2 ವರ್ಷ ಅನುಭವದ ಎನ್.ಹೆಚ್.ಎಂ ಮಾರ್ಗಸೂಚಿಗಳ ಪ್ರಕಾರ ಮಾರ್ಗಸೂಚಿಗಳ ಪ್ರಕಾರ ಏಪ್ರಿಲ್ 16ರವರೆಗೆ ಕಚೇರಿ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು. ನಂತರ ಬಂದ ಆರ್ಜಿಗಳನ್ನು ಸ್ವೀಕರಿಸುವುದಿಲ್ಲ.
ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಎನ್.ಹೆಚ್.ಎಮ್ ನಿಯಮಾನುಸಾರ ಹಾಗೂ ಟಿ.ಓ.ಆರ್ ಮೇರೆಗೆ ರೋಷ್ಟರ್ ಮತು ಮೇರಿಟ್ ಆಧರಿಸಿ ನೇಮಕಾತಿ ಮಾಡಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ನೇಮಕಾತಿ ಸಮಿತಿಯ ತೀರ್ಮಾನವೇ. ಅಂತಿಮವಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *