ರಾಯಚೂರು: ಬೆಳಗಾವಿ-ಹೈದರಾಬಾದ್ ವಿಶೇಷ ರೈಲನ್ನು ಖಾಯಂ ಮಾಡಿ, ವಾರದಲ್ಲಿ 3 ದಿನಗಳಂತೆ ಸಂಚರಿಸುವಂತೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, 17071 ನಂಬರಿನ ಹೈದರಾಬಾದ್-ಬೆಳಗಾವಿ ಎಕ್ಸಪ್ರೆಸ್ ರೈಲು ಪ್ರತಿ ಗುರುವಾರ ಸಂಜೆ 04:30ಕ್ಕೆ ಹೈದರಾಬಾದ್ ರೈಲು ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಿಗ್ಗೆ 10:30ಕ್ಕೆ ಬೆಳಗಾವಿ ರೈಲು ನಿಲ್ದಾಣಕ್ಕೆ ತಲುಪುತ್ತದೆ.

17072 ಸಂಖ್ಯೆಯ ಬೆಳಗಾವಿ ಹೈದರಾಬಾದ್ ಎಕ್ಸಪ್ರೆಸ್ ರೈಲು ಪ್ರತಿ ಶುಕ್ರವಾರ ಮಧ್ಯಾಹ್ನ 01:00ಕ್ಕೆ ಬೆಳಗಾವಿ ರೈಲು ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಿಗ್ಗೆ 07:006 ಹೈದರಾಬಾದ್ ರೈಲು ನಿಲ್ದಾಣಕ್ಕೆ ಬಂದು ತಲುಪುತ್ತದೆ

ಅದೇ ರೀತಿ 17073 ನಂಬರಿನ ಸಿಕಂದರಾಬಾದ್-ಬೆಳಗಾವಿ ಎಕ್ಸಪ್ರೆಸ್ ರೈಲು ಪ್ರತಿ ಸೋಮವಾರ ಸಂಜೆ 04:30ಕ್ಕೆ ಸಿಕಂದರಾಬಾದ್ ರೈಲು ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಿಗ್ಗೆ 10:30ಕ್ಕೆ ಬೆಳಗಾವಿ ರೈಲು ನಿಲ್ದಾಣಕ್ಕೆ ಬಂದು ಸೇರುತ್ತದೆ.
17074 ನಂಬರಿನ ಬೆಳಗಾವಿ- ಸಿಕಂದರಾಬಾದ್ ಎಕ್ಸಪ್ರೆಸ್ ರೈಲು ಪ್ರತಿ ಮಂಗಳವಾರ ಮಧ್ಯಾಹ್ನ 01.00ಕ್ಕೆ ಬೆಳಗಾವಿ ರೈಲು ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಿಗ್ಗೆ 07:15ಕ್ಕೆ ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಸೇರುತ್ತದೆ.
17075 ಸಂಖ್ಯೆಯ ಚೆರ್ಲಪಲ್ಲಿ –ಬೆಳಗಾವಿ ಎಕ್ಸಪ್ರೆಸ್ ರೈಲು ಪ್ರತಿ ಶನಿವಾರ ಸಂಜೆ 04:30ಕ್ಕೆ ಚೆರ್ಲಪಲ್ಲಿ ರೈಲು ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಿಗ್ಗೆ 10:30ಕ್ಕೆ ಬೆಳಗಾವಿ ರೈಲು ನಿಲ್ದಾಣಕ್ಕೆ ಸೇರುತ್ತದೆ.
17076 ಸಂಖ್ಯೆಯ ಬೆಳಗಾವಿ – ಚೆರ್ಲಪಲ್ಲಿ ಎಕ್ಸೆಸ್ ರೈಲು ಪ್ರತಿ ಭಾನುವಾರ ಮಧ್ಯಾಹ್ನ 01:00ಕ್ಕೆ ಬೆಳಗಾವಿ ರೈಲು ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಿಗ್ಗೆ 08:45ಕ್ಕೆ ಚೆರ್ಲಪಲ್ಲಿ ರೈಲು ನಿಲ್ದಾಣಕ್ಕೆ ಬಂದು ಸೇರುತ್ತದೆ ಎಂದು ತಿಳಿಸಿದ್ದಾರೆ.
ಈ ರೈಲುಗಳು ಬೇಗಂಪೇಟ್, ಲಿಂಗಂಪಳ್ಳಿ, ವಿಕಾರಾಬಾದ್, ತಾಂಡೂರು, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯಂ ರೋಡ್, ಅದೋನಿ, ಗುಂತಕಲ್ಲು, ಬಳ್ಳಾರಿ ಜಂ., ದರೋಜಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ತಿಳಿಸಿರುವ ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.
ಇದು ಈ ಭಾಗದ ಜನರ ಬೇಡಿಕೆಯಾಗಿತ್ತು. ಈ ಕುರಿತು ರೈಲ್ವೆಸಚಿವ ಅಶ್ವಿನಿ ವೈಷ್ಣವಿ, ಹಾಗೂ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಈ ಕುರಿತು ಮನವಿ ಮಾಡಿಕೊಳ್ಳಲಾಗಿತ್ತು. ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಸಚಿವರು ಅಭಿನಂದನಾರ್ಹರು ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *