ಲಿಂಗಸಗೂರು : ಏ 5 – ಸ್ವಾತಂತ್ರ್ಯದ ನಂತರ ದೇಶದಲ್ಲಿ ಜನರು ಹಸಿವಿನಿಂದ ಕಂಗಾಲಾದ ಸಂದರ್ಭದಲ್ಲಿ ದೇಶದ ಬಡಜನರ ಹಸಿವುವನ್ನು ನೀಗಿಸಿದ ಮಹಾನ್ ವ್ಯಕ್ತಿ ಡಾ.ಬಾಬು ಜಗಜೀವನ್ ರಾಮ್ ಎಂದು ಸಹಾಯಕ ಆಯುಕ್ತ ಬಸವಣಪ್ಪ ಕಲಶೆಟ್ಟಿ ಹೇಳಿದರು .

ಅವರಿಂದು ಪಟ್ಟಣದ ಡಾ.ಅಂಬೇಡ್ಕ‌ರ್ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ 119 ನೇ ಜನ್ಮ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1947ರಲ್ಲಿ ಬ್ರಿಟಿಷರು ಭಾರತವನ್ನು ಲೂಟಿ ಮಾಡಿದ್ದರಿಂದ ಬಡತನ,
ಅನಕ್ಷರತೆ ತಾಂಡವಾಡುತ್ತಿತ್ತು. ಅಂತಹ ಸಂದರ್ಭದಲ್ಲಿ ದೇಶದ ಉಪ ಪ್ರಧಾನಿ ಹುದ್ದೆಗೇರಿದ ಅವರು ದೇಶದಲ್ಲಿ ಹೊಸ ಕ್ರಾಂತಿಯನ್ನು ಮಾಡಿ ಬಡಜನರ ಹಸಿವು ದೂರ ಮಾಡಿದ ಮಹಾನ್ ವ್ಯಕ್ತಿ ಎಂಬ ಕೀರ್ತಿ ಅವರಿಗೆ ಸಲ್ಲುತ್ತದೆ. 1974 ರಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಬಾಬು ಜಗಜೀವನ್ ರಾಮ್ ರವರು ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶ ಎಂಬ ಹೊಸ ದೇಶವನ್ನು ಸ್ಥಾಪಿಸಿದವರು ಎಂದರು.
ನಂತರ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಈ ದೇಶದ ಸಂವಿಧಾನ ಬರೆದವರು ಡಾ.ಬಿ.ಆರ್.ಅಂಬೇಡ್ಕರ್ ರಾದರೆ ಅದನ್ನು ಸಂಪೂರ್ಣವಾಗಿ ಅನುಷ್ಠಾನ ತಂದವರು ಡಾ.ಬಾಬು ಜಗಜೀವನ್ ರಾಮ್ ಎಂದರು
ಬಡಜನರ ಹಸಿವು ನೀಗಿಸಿದವರು.
ಉಪನ್ಯಾಸ ನೀಡಿದ ನಾರಾಯಣ ಬೆಳಕುರ್ಕಿ ಯವರು 45 ವರ್ಷಗಳ ಕಾಲ ಭಾರತವನ್ನು ಅಭಿವೃದ್ಧಿ ಪತದತ್ತ ಮುನ್ನೆಡೆಸಿದವರು ಡಾ.ಬಾಬು ಜಗಜೀವನ್ ರಾಮ್ ರವರು. ಸರ್ವ ಧರ್ಮ ಸಮನ್ವಯವನ್ನು ಅನುಸರಿಸಿದವರು. ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ರವರು ಶೋಷಿತ, ದಲಿತ, ಹಿಂದುಳಿದ ಅಲ್ಪಸಂಖ್ಯಾತರ ದೌರ್ಜನ್ಯಕ್ಕೆ ಒಳಗಾದವರು , ಅವರಿಬ್ಬರು ಬಡವರ ಅಸ್ಪೃಶ್ಯರ ಎರಡು ಕಣ್ಣುಗಳು ಇದ್ದಂತೆ ಎಂದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೆದಾರ, ಪೊಲೀಸ್ ಉಪ ಅಧೀಕ್ಷಕ ದತ್ತಾತ್ರೇಯ ಕರ್ನಾಡ, ತಹಶೀಲ್ದಾರ್ ಸತ್ಯಮ್ಮ, ಇ ಓ ಉಮೇಶ, ಪಿಐ ಹೊಸಕೇರಪ್ಪ, ಬಿಇಓ ಸುಜಾತ ಹೂನೂರು, ಸಿಡಿಪಿಓ ನಾಗರತ್ನ, ಸಮಾಜ ಕಲ್ಯಾಣ ಅಧಿಕಾರಿ ರವೀಂದ್ರ ಉಪ್ಪಾರ್, ಮಹಾದೇವಪ್ಪ, ರಮೇಶ ಗೋಸ್ಥೆ, ರುದ್ರಪ್ಪ ಬ್ಯಾಗಿ, ಗ್ಯಾನಪ್ಪ ಕಟ್ಟಿಮನಿ, ಮೋಹನ್ ಗೋಸ್ಥೆ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *