ರಾಯಚೂರು ಏಪ್ರಿಲ್ 05 (ಕರ್ನಾಟಕ ವಾರ್ತೆ): ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 2ರ 110 ಕೆ.ವಿ ಮೇಸ್, ಎಪಿಎಮ್‌ಸಿ ಯಾರ್ಡ್ 3 ಡ್ರಾಗ್‌ಹೌಸ್ ಲಿಂಕ್ ಲೈನ್ ಕಾಮಗಾರಿ ನಡೆಯುವ ಪ್ರಯುಕ್ತ ಏಪ್ರಿಲ್ 07ರ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಅಲ್ಲಮಪ್ರಭು ಕಾಲೋನಿ, ಪೋತಗಲ್ ರೋಡ, ಎಲ್.ಬಿ.ಎಸ್. ನಗರ, ಅಲಿ ಕಾಲೋನಿ, ಚಂದ್ರ ಬಂಡ ರಸ್ತೆ, ಸಂತೋಷ ನಗರ, ವಿಶ್ವನಾಥ ಕಾಲೋನಿ, ಪೋತಗಲ್ ಕ್ರಾಸ್, ಆಶ್ರಯ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿರಂತರ ಗ್ರಾಹಕರ ಸೇವಾ ಕೇಂದ್ರ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *