ಮಸ್ಕಿ: ಪಟ್ಟಣದ ತಹಶೀಲ್ದಾರರ ಕಚೇರಿಯಲ್ಲಿ ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ್ ರಾಮ್ ರವರ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. ನಂತರ ಮಾತನಾಡಿದ ತಹಸೀಲ್ದಾರ ಮಂಜುನಾಥ ಭೊಗವತಿ ಡಾ. ಬಾಬು ಜಗಜೀವನ್ ರಾಮ್ ಅವರು ಭಾರತದ ಸ್ವಾತಂತ್ರ ಹೋರಾಟಗಾರರು, ಶೋಷಿತರ ಧ್ವನಿಯಾಗಿ ಭಾರತ ಚರಿತ್ರೆಯಲ್ಲಿ ಅಪ್ರತಿಮ ನಾಯಕರಾಗಿ ಇಂದಿಗೂ ಜನರ ಮನದಲ್ಲಿ ಶಾಶ್ವತ ನಾಯಕರಾಗಿ ಇದ್ದಾರೆ, ದೇಶದ ಕಾರ್ಮಿಕ, ಕೃಷಿ, ರಕ್ಷಣೆ ಹಾಗೂ ಉಪ ಪ್ರಧಾನಮಂತ್ರಿಯಾಗಿ ಅತ್ಯುತ್ತಮ ಆಡಳಿತವನ್ನು ನೀಡಿದ್ದು, ಅವರನ್ನ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧಿ ಪಡೆದ ಮಹಾನ್ ಪುರುಷರು, ಸಮಾನತೆಗಾಗಿ ಸಮಾಜದಲ್ಲಿ ಹಲವಾರು ಹೋರಾಟಗಳನ್ನು ನಡೆಸಿದರು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಇಒ ಅಮರೇಶ ಯಾದವ, ಸಿ ಪಿ ಐ ರಾಮಣ್ಣ ಜಲಗಾರ, ಪುರಸಭಾ ಮುಖ್ಯ ಅಧಿಕಾರಿ ನರಸಾರೆಡ್ಡಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು, ತಹಸಿಲ್ದಾರ ಕಚೇರಿ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *