ಸಿಂಧನೂರು – ಮಂಗಳೂರಿನ ಶಾಂತಿ ಪ್ರಕಾಶನ ವ್ಯವಸ್ಥಾಪಕರು ಹಾಗೂ ಕನ್ನಡ ಖುರಾನ್ ನ ಖ್ಯಾತ ಪ್ರವಚನಕಾರರಾದ ಮಹಮ್ಮದ್ ಕುಂಞ ಅವರು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಎಲ್ಲಾ ವೃದ್ಧರ ಯೋಗ ಕ್ಷೇಮವನ್ನು ವಿಚಾರಿಸಿ ಹಣ್ಣು ಹಂಪಲುಗಳನ್ನು ವಿತರಿಸಿ ಆಶ್ರಯದಾತರುಗಳಿಗೆ ಆತ್ಮಸ್ಥೈರ್ಯ ತುಂಬಿದರು. ಈ ಸಮಯದಲ್ಲಿ ಆಶ್ರಮದ ವತಿಯಿಂದ ಮಹಮ್ಮದ್ ಕುಂಞ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ನಂತರ ಖ್ಯಾತ ಪ್ರವಚನಕಾರರಾದ ಮಹಮ್ಮದ್ ಕುಂಞ ಮಾತನಾಡಿ ಎಲ್ಲಾ ಧರ್ಮಗಳಲ್ಲಿಯೂ ಹೆತ್ತವರನ್ನು ನೊಂದವರನ್ನು ಅನಾಥರನ್ನು ಪ್ರೀತಿಸಬೇಕು ಎನ್ನುವ ಸಂದೇಶಗಳು ಇರುತ್ತವೆ. ಪ್ರವಾದಿಯವರು ಖುರಾನ್ ನಲ್ಲಿ ತಾಯಿಯ ಪಾದದ ಕೆಳಗಡೆ ಸ್ವರ್ಗವಿದೆ ಎಂದು ಹೇಳುತ್ತಾರೆ. ಆದರೆ ಇಂದು ಕಾರುಣ್ಯ ಆಶ್ರಮದಲ್ಲಿ ನಾನು ಅದೆಷ್ಟೋ ತಂದೆ ತಾಯಿಗಳನ್ನು ನೋಡಿ ಅವರ ಬಗ್ಗೆ ತಿಳಿದು ಕೊಂಡಾಗ ಬಹಳ ದುಃಖವಾಯಿತು. ಇಂಥವರ ಬದುಕಿಗಾಗಿ ಹುಟ್ಟಿಕೊಂಡಿರುವ ಈ ಕಾರುಣ್ಯ ಕುಟುಂಬ ಮಾನವ ಧರ್ಮದ ಧರ್ಮ ಕೇಂದ್ರವಾಗಿದೆ. ಮಾನವ ಧರ್ಮದ ಮಾನವೀಯತೆಯ ಕಾರುಣ್ಯ ಆಶ್ರಮದ ಸೇವೆ ಅಭಿನಂದನಾರ್ಹವಾದದ್ದು. ಇಂತಹ ಸೇವೆಗೆ ಪ್ರತಿಯೊಬ್ಬರೂ ಕೂಡ ಸಹಾಯ ಸಹಕಾರ ಮಾಡಿದಾಗ ಮಾತ್ರ ತಮ್ಮೆಲ್ಲರ ಬದುಕು ಸಾರ್ಥಕವಾಗುತ್ತದೆ. ಪ್ರವಾದಿಯವರ ಆಶಯದಂತೆ ಕಾರುಣ್ಯ ಕುಟುಂಬದ ಸೇವೆ ಜರುಗುತ್ತಿದೆ. ಇಂತಹ ಒಂದು ಪುಣ್ಯಕ್ಷೇತ್ರದಲ್ಲಿನ ಆಶ್ರಯದಾತ ನಿಜ ದೇವರುಗಳ ದರ್ಶನ ನನಗಾಗಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಮುಂದಿನ ದಿನಮಾನಗಳಲ್ಲಿ ನಾನು ಸಿಂಧನೂರಿಗೆ ಬಂದಾಗ ಖಂಡಿತವಾಗಿ ಬರುತ್ತಿರುತ್ತೇನೆ ಎಂದು ಮಾತನಾಡಿ ಆಶ್ರಮದ ಸೇವಾಕರ್ತ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಿ.ಹುಸೇನ್ ಸಾಬ್ ಅಧ್ಯಕ್ಷರು ಜಮಾಆತೆ ಇಸ್ಲಾಮಿ ಹಿಂದ್ ಸಿಂಧನೂರು.ಅಬುಲೇಶ್ ನಾಯಕ್ ಅಧ್ಯಕ್ಷರು ಸೋಲಿದಾರಿಟಿ ಯೂಥ್ ಮೂವ್ ಮೆಂಟ್ ಸಿಂಧನೂರು. ತಮೀಮ್ ಇಸ್ಲಾಂ. ಮಹಮ್ಮದ್ ಉಮೇರ್. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹರೇಟನೂರು. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ ಮೀನಾಕ್ಷಮ್ಮ. ಲಕ್ಷ್ಮಿ ಅನೇಕರು ಉಪಸ್ಥಿ ತರಿದ್ದರು


