ಅರಕೇರಾ : ತಾಲೂಕು ವ್ಯಾಪ್ತಿಯಲ್ಲಿಬರುವ ಗಲಗ,ಸುಣ್ಣದಕಲು,ಕಾಟಮಳ್ಳಿ,ಮುಂಡರಗಿ,ಶ್ಯಾನರದೊಡ್ಡಿ,ಮದರಕಲ್ ಸೇರಿದತೆ ಈ ಗ್ರಾಮಗಳಿಗೆ ರಂಜಾನ ಹಬ್ಬದ ಅಂಗವಾಗಿ ಆಹಾರ ಕಿಟ್ ವಿತರಣೆಮಾಡದೇ ಬಡವರ್ಗದವರಿಗೆ ಅನ್ಯಾಯವಾಗಿದೆ ಎಂದು ಗ್ರಾಮದ ಮೌಲಸಾಬ ನದಾಫ್, ಶಮ್ಯುಸುದ್ದಿನ್‌ಖುರಷಿ, ರಾಜಸಾಬ ಇವರುಗಳು ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ.
ಅವರು ಅರಕೇರಾ ಪಟ್ಟಣದಲ್ಲಿ ಪ್ರತಿಕಾಭವನದಲ್ಲಿ ಸುದ್ದಿಘೋಷ್ಟಿಯಲ್ಲಿ ಮಾತನಾಡಿ ರಂಜಾನ ಹಬ್ಬದ ಸಂದರ್ಭದಲ್ಲಿ ಬಡವರು ನಿರ್ಗತಿಕರು ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡಲು ದಿನಸಿ ಪದಾರ್ಥಗಳ ಕಿಟ್ ವಿತರಿಸಲಾಗುತ್ತಿದೆ. ಇದರಲ್ಲಿ ಅಕ್ಕಿ,ಸಕ್ಕರೆ, ಎಣ್ಣೆ, ಗೋಧಿಹಿಟ್ಟು, ಶಾವಿಗೆ, ಇತರೆ ಆಹಾರ ಪದಾರ್ಥಗಳು ಇರುತ್ತವೆ.
ಬಡವರು ಸಹ ಹಬ್ಬದಿನ ಹಸಿದಿರಬಾರದು ಎಂಬುವದು ಇದರ ಉದ್ದೇಶ ದಿಂದ ಹಬ್ಬದ ಮುನ್ನಾದಿನ ಅಥವಾ ರಂಜಾನ ತಿಂಗಳಿನಲ್ಲಿ ಬಡ ಕುಟುಂಬಗಳಿಗೆ ದಾನಿಗಳು,ಟ್ರಸ್ಟ್ ಗಳು,ಶ್ರೀಮಂತರು ಇವರಗಳಿಂದ ಆಹಾರ ಕಿಟ್ ವಿತರಿಸಿ ಸಂತೋಷದಿಂದ ಹಬ್ಬ ಆಚರಿಸುತ್ತಾರೆ, ಆದರೆ ಗಲಗ ಗ್ರಾಮ ಸೇರಿದಂತೆ ಸುಮಾರು 500 ಕಿಟ್ ಬಡಕುಟುಂಬಗಳಿಗೆ ಉಚಿತಯವಾಗಿ ಆಹಾರಕಿಟ್ ವಿತರಣೆ ಆಗಬೇಕಾಗಿತ್ತು.
ಆದರೆ ಇಲ್ಲಿಯ ಖಾಜಿಯವರ ದಿವ್ಯ ನಿರ್ಲಕ್ಷತನದಿಂದ ಗಲಗ ಗ್ರಾಮದಲ್ಲಿನ ಕಟಗರ್ ಓಣಿ ಸೇರಿದಂತೆ
ಸುಣ್ಣದಕಲು,ಕಾಟಮಳ್ಳಿ, ಮುಂಡರಗಿ,ಶ್ಯಾನರದೊಡ್ಡಿ,ಮದರಕಲ್ ಸೇರಿದಂತೆೆ ಹಂಚದೆ ಬಡವರ್ಗದವರಿಗೆ ಅನ್ಯಾಯ ಮಾಡಿದ್ದಾರೆಂದು ಆಕ್ರೋಶವ್ಯಕ್ತಪಡಿಸಿದರು.
ಬಡವರ್ಗದವರಿಗೆ ಅನ್ಯಾಯ ವ್ಯೆಸಿಗಿರುವ ಇವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಂಸ್ಥೆಗಳಿಗೆ ಅಥವಾ ಕಿಟ್ ನೀಡಿದವರು ಇತ್ತಕಡೆ ಗಮನಹರಿಸಿ ಮುಂದೆ ಈರೀತಿ ಆಗದಂತೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅನ್ಯಾಯವಾಗಿರುವ ಕುಟುಂಬದ ಸದಸ್ಯರ ಪರವಾಗಿ ಮನವಿಮಾಡಿಕೊಂಡಿದ್ದಾರೆ.
ಸುದ್ದಿ ಪೈಲ್.ಸುದ್ದಿ ಸಂಖ್ಯೆ ೩ ಅರಕೇರಾ ಪತ್ರಿಕಾ ಭವನದಲ್ಲಿಸುದ್ದಿಗೋಷ್ಟಿಯಲ್ಲಿ ಗಲಗ ಗ್ರಾಮದ ಮೌಲಸಾಬ ನದಾಫ್, ಶಮ್ಯುಸುದ್ದಿನ್‌ಖುರಷಿ, ರಾಜಸಾಬ ಇವರುಗಳು ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದ್ದು.

Leave a Reply

Your email address will not be published. Required fields are marked *