ಅರಕೇರಾ: ತಾಲೂಕಿನ ಮಲ್ಲೇದೇವರಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮ ನಾಯಕ್ ತಾಂಡಾದಲ್ಲಿ ಏಪ್ರಿಲ್ 7ರಂದು ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಸಂಘಟಕರು ಹಾಗೂ ಯುವ ಮುಖಂಡರಾದ ಶ್ರೀ ಶರಣಬಸವ ಚೌವ್ಹಾಣ್
ಹೆಚ್. ಎನ್. ತಾಂಡಾ
ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲದಕಲ್ ಗೆಳೆಯರ ಬಳಗದ ಮೂಲಕ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಿರುವ ಸಹಾಯಕ ಪ್ರಾಧ್ಯಾಪಕರಾದ ಡಾ. ಮಾರುತಿ ಕುಮಾರ ಮಲದಕಲ್ ಅವರ ಮಗಳಾದ ಕು. ನಿಹಾರಿಕಾ ಅವರ 5ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ.
ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಯಚೂರಿನ ಹೆಲ್ಪ್ ಏಜ್ ಇಂಡಿಯಾ, ದೃಷ್ಠಿ ಕಣ್ಣಿನ ಆಸ್ಪತ್ರೆ, ದೇವದುರ್ಗದ ಜ್ಞಾನವೃಕ್ಷ ಟ್ರಸ್ಟ್ ಹಾಗೂ ಗೋರಾ ಸೇನೆಯ ಅರಕೇರಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಶಿಬಿರ ನಡೆಯಲಿದೆ.
ಮಲ್ಲೇದೇವರಗುಡ್ಡ ಮತ್ತು
ಕ್ಯಾದಿಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ತಾಂಡಾಗಳ ನಿವಾಸಿಗಳು ಈ ಶಿಬಿರದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಶಿಬಿರದಲ್ಲಿ ರಕ್ತದ ಒತ್ತಡ (ಬಿಪಿ) ಮತ್ತು ರಕ್ತದ ಸಕ್ಕರೆ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ. ಅಗತ್ಯ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು. ಜೊತೆಗೆ ಕನ್ನಡಕಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೆರವಾಗುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.
▣ ಶಿಬಿರದ ವಿವರಗಳು ▣
📅 ದಿನಾಂಕ: ಏಪ್ರಿಲ್ 7 (ಮಂಗಳವಾರ)
⏰ ಸಮಯ: ಬೆಳಗ್ಗೆ 9 ರಿಂದ ಸಂಜೆ 4ರವರೆಗೆ
📍 ಸ್ಥಳ: ಹನುಮ ನಾಯಕ್ ತಾಂಡಾ (ಮಲ್ಲೇದೇವರಗುಡ್ಡ ಗ್ರಾಮ ಪಂಚಾಯಿತಿ)
ತಾ. ಅರಕೇರಾ.
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶರಣಬಸವ ಚೌವ್ಹಾಣ್
9972000839
ಟೀಕಪ್ಪ ಚೌವ್ಹಾಣ್ 9739952143
ಮೂನಪ್ಪ – 9902560413
ಶರಣಬಸವ – 9972000839

