ಏಪ್ರಿಲ್ 3 ಭಾರತ ದೇಶಕ್ಕೆ ಒಂದು ದುಃಖದ ದಿನ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದ ಮಹಾಶಕ್ತಿ ಶಿವಾಜಿ ಮಹಾರಾಜರು ನಮ್ಮನ್ನು ಅಗಲಿದ ದಿನವಿದು. ಅವರ ವಿಚಾರಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕೆಂದು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಕರೆ ನೀಡಿದರು.

ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯತಿಥಿಯನ್ನು ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್ ವತಿಯಿಂದ ನಗರದ ಗಂಗಾವತಿ ರಸ್ತೆಯಲ್ಲಿರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನುಡಿನಮನ ಸಲ್ಲಿಸಿ ಮಾತನಾಡಿದರು.

ಈವೇಳೆಃ ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್ ಅಧ್ಯಕ್ಷ
ವಿಶ್ವನಾಥ ಚೌದ್ರಿ, ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ದೇವರಾಜ ಪಾಟೀಲ್, ಕಾರ್ಯದರ್ಶಿ
ಕೆ.ಜಗದೀಶ, ಟಿ.ರಾಮಾಂಜನೇಯ, ನಾಗೇಶ ಪವಾರ್,
ಕಾನೂನು ಸಲಹೆಗಾರ ಗಿರೀಶ, ಮನೋಹರ ಹಿರೇಮಠ, ಶುಭಾಷ ಪವಾರ್, ಶಿವು ಸೇರಿದಂತೆ ಹಲವಾರು ಹಿಂದೂ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *