ಲಿಂಗಸಗೂರು : ಏಪ್ರೀಲ್ 3 ರಂದು ಉಮಾ ಮಹೇಶ್ವರಿ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಸಮ್ ಟ್ಯಾಲೆಂಟ್ ಅವಾರ್ಡ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ವಿನಯಕುಮಾರ್ ಗಣಾಚಾರಿ ತಿಳಿಸಿದರು. ಅವರು, ಕಳೆದ 10 ವರ್ಷಗಳಿಂದ ಟ್ಯಾಲೆಂಟ್ ಆವಾರ್ಡ್ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವು 25 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಈ ಸ್ಪರ್ಧೆಯಲ್ಲಿ ರ್ಯಂಕ್ ಪಡೆದ 5 ವಿದ್ಯಾರ್ಥಿಗಳಿಗೆ ಪಿಯುಸಿ ವಿಜ್ಞಾನ ವಿಭಾಗಕ್ಕೆ ಎರಡು ವರ್ಷದ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು.6 ರಿಂದ 10 ರ್ಯಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷ ಉಚಿತ ಶಿಕ್ಷಣವನ್ನು ನೀಡಲಾಗುವುದು. 10 ರಿಂದ 20 ರ್ಯಂಕ್ ಪಡೆದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗಕ್ಕೆ ಶೇಕಡ 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಸಮ್ ಟ್ಯಾಲೆಂಟ್ ಆವಾರ್ಡ್ ಸ್ಪರ್ಧೆ ಗಾಗಿ ಈ ನಂಬರ್ ಗೆ
9611556417, 8197593926, 8904076146, 9880340882 ಸಂಪರ್ಕಿಲು ಕೋರಲಾಗಿದೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಜಿ.ವಿ.ಸುರೇಶ, ಸಹ ಆಡಳಿತಾಧಿಕಾರಿ ಅಮರೇಶಸ್ವಾಮಿ ತೋರಣದಿನ್ನಿ, ಪದವಿ ಕಾಲೇಜಿನ ಪ್ರಾಚಾರ್ಯ ವಿರೇಶ ಆದೋನಿ, ಸಂಗಯ್ಯ ಸಿಂದಗಿಮಠ, ಶಂಕ್ರಪ್ಪ ಕನ್ನಾಳ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *