ಮಾನ್ವಿ. ತಾಲೂಕಿನ ಪುಟ್ಟ ಗ್ರಾಮ ದೇವಿಪುರದಲ್ಲಿ ಹುಟ್ಟಿದ ಶ್ರೀ ಮಲ್ಲಯ್ಯ ನಾಯಕ ಪೆದರೆಡ್ಡಿರವರು ಕಡು ಬಡತನದಲ್ಲಿ ಹುಟ್ಟಿ ಸ್ವ ಗ್ರಾಮದಲ್ಲಿ ವಿದ್ಯಾಭ್ಯಾಸ ಆರಂಭ ಮಾಡಿ ನಂತರದ ದಿನಗಳಲ್ಲಿ ಹೆಚ್ಚಿನ ಅಭ್ಯಾಸ ಮಾನ್ವಿ ತಾಲೂಕಿನ ಸರ್ಕಾರಿ ಶಾಲಾ ಕಾಲೇಜು ಗಳಲ್ಲಿ ಅಭ್ಯಾಸ ಮಾಡಿ 2004ರಲ್ಲಿ ಭಾರತೀಯ ಗಡಿ ಭದ್ರತಾ ಪಡೆಗೆ ಸೇರಿ ತರಬೇತಿ ಮುಗಿದ ನಂತರ ಭಾರತದ ಗುಜರಾತ್ ದಿಂದ ಹಿಡಿದು ಈಶಾನ್ಯ ರಾಜ್ಯಗಳಲ್ಲಿಯೂ ಕೂಡ ತಮ್ಮ ಸೇವೆ ಸಲ್ಲಿಸಿ ಈಗ ಸ್ವಯಂ ನಿವೃತ್ತಿಗೊಂಡು ಸ್ವ ಗ್ರಾಮಕ್ಕೆ ದಿನಾಂಕ 4 /4/ 2026ರಂದು ಶನಿವಾರ ಆಗಮಿಸುತ್ತಿದ್ದಾರೆ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಮಾಡಿಕೊಳ್ಳುವವರಿದ್ದಾರೆ ಕಾರಣ ಮಾನ್ವಿ ತಾಲೂಕಿನ ಸಮಸ್ತ ದೇಶಭಕ್ತರು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಯೋಧನಿಗೆ ಸ್ವಾಗತ ಕೋರಬೇಕೆಂದು ಅಧ್ಯಕ್ಷರು ಕೇಂದ್ರೀಯ ಶಸಸ್ತ್ರ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ ಸಿರವಾರ ಮತ್ತು ಮಾನ್ವಿ ವಂದೇ ಮಾತರಂ ಯುವ ಸಂಘ ಮದ್ಲಾಪುರ ಅಭಿಮಾನದ ಅಭಿನಂದನೆಗಳು ಸಲ್ಲಿಸಿದ್ದಾರೆ.

