ರಾಯಚೂರು ಏಪ್ರಿಲ್ 01 (ಕರ್ನಾಟಕ ವಾರ್ತೆ): ಇಲ್ಲಿನ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೇ ಸ್ಟೇಷನ್ ಏರಿಯಾದ ಗೂಡ್ ಶೇಡ್‌ನಲ್ಲಿ ಮಾರ್ಚ್ 28ರ ಸಂಜೆ 5.30ಗಂಟೆ ಸುಮಾರಿಗೆ ಅಂದಾಜು 45-50 ವರ್ಷ ವಯಸ್ಸಿನ ಅಪರಿಚಿತ ಪುರುಷನ ಶವ ಕಂಡುಬಂದಿದ್ದು, ಸಂಬಂಧಿಕರ ಪತ್ತೆಗೆ ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಗಳು ಕೋರಿದ್ದಾರೆ.
ಅಪರಿಚಿತ ಮೃತನ ಹೆಸರು, ವಿಳಾಸ ತಿಳಿದು ಬಂದಿಲ್ಲ. ವ್ಯಕ್ತಿಯ ವಯಸ್ಸು 45-50 ವರ್ಷ, 5.5 ಎತ್ತರ ದುಂಡು ಮುಖ, ಗೋದಿ ಮೈ ಬಣ್ಣ ಮೈಬಣ್ಣ ಚಹರೆ ಹೊಂದಲಾಗಿದೆ.
ಮೃತನ ಮಾಹಿತಿ ತಿಳಿದು ಬಂದಲ್ಲಿ ಪಶ್ಚಿಮ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08532-232507 ಅಥವಾ ಪಶ್ಚಿಮ ಪೊಲೀಸ್ ಠಾಣೆಯ ಪಿ.ಎಸ್.ಐ ಮೊಬೈಲ್ ಸಂಖ್ಯೆ: 9480803847 ಗೆ ಸಂಪರ್ಕಿಸುವಂತೆ ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *