ಸಿಂಧನೂರು ಎ 01 – ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಸ್ವಾಮಿ ಚಾರಿಟೇಬಲ್ ಟ್ರಸ್ಟ್ (ರಿ)ಕರಡಕಲ್ ಲಿಂಗಸೂಗೂರು. ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ (ರಿ) ಸಿಂಧನೂರು. ಹಾಗೂ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನ ಸಮಿತಿ,(ರಿ )ಹರೇಟನೂರು ಮತ್ತು ಸಂಜೆ ವಾಹಿನಿ ಹಾಗೂ ಭತ್ತದ ನಾಡು ಕನ್ನಡ ದಿನಪತ್ರಿಕೆ ಹಾಗೂ ಬೆಳಕು ಸಂಸ್ಥೆ ರಾಯಚೂರು ಇವರುಗಳ ಸಹಯೋಗದಲ್ಲಿ ತ್ರಿವಿಧ ದಾಸೋಹಿ ಮೂರ್ತಿಗಳಾದ ಲಿಂಗೈಕ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳು ಸಿದ್ದಗಂಗಾ ಮಠ ತುಮಕೂರು ಇವರ 119ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು. ಇಂದಿನ ಈ ಕಾರ್ಯಕ್ರಮದ ಮಹಾಪ್ರಸಾದ ಸೇವೆಯನ್ನು ಚಿದಾನಂದ ಹೂಗಾರ ಗಂಗಾವತಿ ಇವರು ಆಶ್ರಮದಲ್ಲಿ ಇಡೀ ದಿನದ ಮಹಾಪ್ರಸಾದ ಸೇವೆಯನ್ನು ಸಲ್ಲಿಸಿ ಆಶ್ರಯದಾತರುಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಸಿದ್ದಗಂಗಾ ಶ್ರೀಗಳ ಜಯಂತೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಚೇತನ ಫೌಂಡೇಶನ್ ಧಾರವಾಡ ಗಂಧದ ಗುಡಿ ಕನ್ನಡ ಸಂಘ ಬೆಂಗಳೂರು ಮತ್ತು ಕಾರುಣ್ಯ ಆಶ್ರಮ ಸಿಂಧನೂರು ಇವರುಗಳಿಂದ ಗಂಗಾವತಿಯ ಸಮಾಜಸೇವಕರಾದ ಚಿದಾನಂದ ಹೂಗಾರ ಇವರಿಗೆ ” ಸಿದ್ದಗಂಗಾ ಶ್ರೀ ರಾಷ್ಟ್ರೀಯ ಸೇವಾ ಸ್ಪೂರ್ತಿ ” ಏನ್ ಓ ಶ್ರೇಷ್ಠ ಪ್ರಶಸ್ತಿಯನ್ನು ವಿತರಿಸಿ ಗೌರವಿಸಿ ಆಶೀರ್ವದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹರೇಟನೂರು ಮಾತನಾಡಿ ನಮ್ಮ ನಾಡಿನಲ್ಲಿ ಜನಿಸಿದ ಮಹಾನ್ ಚೇತನ ಸಿದ್ದಗಂಗಾ ಶ್ರೀಗಳು ವಿಶ್ವ ಕಂಡಂತಹ ಶ್ರೇಷ್ಠ ಶರಣರಾಗಿದ್ದರು. ಅವರು ಅಕ್ಷರ ಅನ್ನ ಜ್ಞಾನದಾಸೋಹದ ಮೂರ್ತಿಗಳಾಗಿದ್ದರು. ಇಂತಹ ನಡೆದಾಡುವ ದೇವರ ಜಯಂತೋತ್ಸವ ಕಾರ್ಯಕ್ರಮ ಪ್ರತಿ ವರ್ಷವೂ ಕೂಡ ಕಾರುಣ್ಯ ಕುಟುಂಬದಿಂದ ನೆರವೇರಿಸಿ ಒಬ್ಬ ಮಹಾನ್ ಸಾಧಕರನ್ನು ಗೌರವಿಸುವುದು ಕಾರುಣ್ಯ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಸಿದ್ದಗಂಗಾ ಶ್ರೀಗಳು ಜಗತ್ತು ಕಂಡ ದೇವಮಾನವರಾಗಿದ್ದರು. ಅದೆಷ್ಟು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ತಾವು ಜೋಳಿಗೆ ಹಾಕಿ ಶಿಕ್ಷಣ ಸಂಸ್ಕಾರ ಸಂಸ್ಕೃತಿಯನ್ನು ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕೂಡ ಅಳವಡಿಸಿ ಸಾಮಾಜಿಕ ಕಳಕಳಿಯನ್ನು ಜಗತ್ತಿಗೆ ತೋರಿಸಿಕೊಟ್ಟಂತಹ ನಮ್ಮ ಅಪ್ಪಾಜಿ ಕಾರುಣ್ಯ ಕುಟುಂಬದ ನಡೆದಾಡುವ ದೇವರಾಗಿದ್ದಾರೆ. ಇಂತಹ ದೇವರ ಆಶೀರ್ವಾದ ಆಶ್ರಮದಲ್ಲಿರುವ ಆಶ್ರಯದಾತರುಗಳಿಗೆ ಸಿಗಲಿ ಇಲ್ಲಿನ ಆಶ್ರಯದಾತರುಗಳ ಹಿಂದಿನ ನೋವು ಕಷ್ಟಗಳನ್ನು ಮರೆಸುವಂತಾಗಿ ಇವರ ಬಾಳಿಗೆ ಸುಂದರ ಬದುಕು ಸಿಗಲಿ ಎನ್ನುವುದು ಕಾರುಣ್ಯ ಕುಟುಂಬದ ಮೂಲ ಆಶಯ ಇಂತಹ ಶರಣರ ಸಂತರ ಪರಮಪೂಜ್ಯರ ಆಶೀರ್ವಾದವೇ ಕಾರುಣ್ಯ ಕುಟುಂಬದ ಸೇವೆಗೆ ಸ್ಫೂರ್ತಿಯಾಗಿದೆ. ನೊಂದವರ ನಾಡಿಮಿಡಿತವಾಗಿರುವ ಸಿದ್ಧಗಂಗಾ ಶ್ರೀಗಳು ಕಾರುಣ್ಯ ಕುಟುಂಬದ ಕಾರುಣ್ಯ ಮೂರ್ತಿಗಳಾಗಿದ್ದಾರೆ ಎಂದು ಮಾತನಾಡಿ ಸಾಧಕರಾದ ಚಿದಾನಂದ ಹೂಗಾರ ಅವರಿಗೆ ಅಭಿನಂದನೆಗಳನ್ನು ಅರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರವೀಣ್ ಕುಮಾರ್. ಶೈಲಜಾ ಹಿರೇಮಠ.ಶರಣಮ್ಮ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ.ಮೀನಾಕ್ಷಮ್ಮ. ಲಕ್ಷ್ಮಿ. ಹಾಗೂ ಅನೇಕರು ಉಪಸ್ಥಿತರಿದ್ದರು

