ಬಳಗಾನೂರು ಮಾ,31: ಪಟ್ಟಣದ ಅಭಿವೃದ್ಧಿಯ ಭವಿಷ್ಯಕ್ಕೆ ದಿಕ್ಕು ತೋರಿಸುವ 2026-27ನೇ ಸಾಲಿನ ಆಯವ್ಯಯವನ್ನು ಬಳಗಾನೂರು ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಶಿವಕುಮಾರ ನಾಯಕ ಮಂಗಳವಾರ ಮಂಡಿಸಿದ್ದಾರೆ. ಈ ಬಜೆಟ್ ಪಟ್ಟಣದ ಆರ್ಥಿಕ ಸ್ಥಿತಿಗತಿಗಳನ್ನು ಮಾತ್ರವಲ್ಲ,ಮುಂದಿನ ವರ್ಷದ ಕಾರ್ಯಯೋಜನೆಗೆ ಒಂದು ನಕ್ಷೆಯಂತಿದೆ.
ಆಯವ್ಯಯದ ಪ್ರಕಾರ, ವರ್ಷದ ಆರಂಭದಲ್ಲಿ ಪಂಚಾಯ್ತಿಗೆ ₹66,38,522 ನಗದು ಮತ್ತು ಬ್ಯಾಂಕ್ ಶಿಲ್ಕು ಲಭ್ಯವಿದೆ. ಇದು ಹಿಂದಿನ ವರ್ಷದ ಆರ್ಥಿಕ ಸ್ಥಿರತೆಯನ್ನು ಸೂಚಿಸುತ್ತದೆ.

ಪಂಚಾಯ್ತಿಯ ಒಟ್ಟು ಸ್ವೀಕೃತಿಗಳು ₹19,01,74,000 ಎಂದು ಅಂದಾಜಿಸಲಾಗಿದೆ. ಇದರಲ್ಲಿ:
ರಾಜಸ್ವ ಸ್ವೀಕೃತಿಗಳು: ₹2,85,46,000
ಬಂಡವಾಳ ಸ್ವೀಕೃತಿಗಳು: ₹7,75,00,000
ಅಸಾಧಾರಣ ಸ್ವೀಕೃತಿಗಳು:₹8,41,28,000
ಈ ಅಂಕಿ-ಅಂಶಗಳು ಸರ್ಕಾರದ ಅನುದಾನಗಳು ಹಾಗೂ ವಿಶೇಷ ಯೋಜನೆಗಳಿಂದ ಹೆಚ್ಚಿನ ಆದಾಯ ನಿರೀಕ್ಷೆಯಿರುವುದನ್ನು ತೋರಿಸುತ್ತವೆ.
ಒಟ್ಟು ಪಾವತಿಗಳು ₹19,22,72,000 ಆಗಿದ್ದು,
ಖರ್ಚು ಭಾಗದಲ್ಲಿ:ರಾಜಸ್ವ ಪಾವತಿಗಳು: ₹2,74,80,000
ಬಂಡವಾಳ ಪಾವತಿಗಳು: ₹7,81,50,000
ಅಸಾಧಾರಣ ಪಾವತಿಗಳು₹8,66,42,000
ಇವು ಮೂಲಸೌಕರ್ಯ ಅಭಿವೃದ್ಧಿ, ಯೋಜನೆಗಳ ಅನುಷ್ಠಾನ ಹಾಗೂ ಅನಿವಾರ್ಯ ವೆಚ್ಚಗಳಿಗೆ ಮೀಸಲಾದಂತಿವೆ.
ಅಂತಿಮವಾಗಿ,ಆದಾಯಕ್ಕಿಂತ ಖರ್ಚು ಸ್ವಲ್ಪ ಹೆಚ್ಚಿರುವ ಹಿನ್ನೆಲೆಯಲ್ಲಿ, ವರ್ಷದ ಕೊನೆಯಲ್ಲಿ ಪಂಚಾಯ್ತಿಗೆ ₹45,40,522 ಶಿಲ್ಕು ಉಳಿಯಲಿದೆ ಎಂದು ಅಂದಾಜಿಸಲಾಗಿದೆ. ಇದು ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವಲ್ಲಿ ಪಂಚಾಯ್ತಿಗೆ ಸಣ್ಣ ಸವಾಲು ಎದುರಾಗಬಹುದು ಎಂಬ ಸೂಚನೆ ನೀಡುತ್ತದೆ.
ಒಟ್ಟಾರೆ, ಈ ಆಯವ್ಯಯವು ಬಳಗಾನೂರು ಪಟ್ಟಣದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದರೂ,ಖರ್ಚಿನ ಪ್ರಮಾಣ ಹೆಚ್ಚಿರುವುದರಿಂದ ಹಣಕಾಸು ನಿರ್ವಹಣೆಯಲ್ಲಿ ಜಾಗ್ರತೆ ಅಗತ್ಯವಿದೆ. ಸಮರ್ಪಕ ಯೋಜನೆ ಹಾಗೂ ಅನುಷ್ಠಾನದ ಮೂಲಕ ಪಟ್ಟಣದ ಅಭಿವೃದ್ಧಿಯನ್ನು ವೇಗಗೊಳಿಸುವ ನಂಬಿಕೆ ವ್ಯಕ್ತವಾಗಿದೆ.
“ಸಂಖ್ಯೆಗಳು ಮಾತ್ರವಲ್ಲ, ಅಭಿವೃದ್ಧಿಯ ಕನಸುಗಳಿಗೂ ಇದು ಒಂದು ರೂಪುರೇಷೆ” ಯಂತಿದೆ.
ಈ ವಿಶೇಷ ಸಭೆಯಲ್ಲಿ ಸರ್ವಸದಸ್ಯರೂ ಹಾಜರಿದ್ದು ತಮ್ಮ ಮುನ್ನೋಟ,ಇದುವರೆಗಿನ ಕಾರ್ಯವೈಖರಿಯ ಹಿನ್ನೋಟದ ಬಗ್ಗೆ ಅವಲೋಕನ ಮಾಡಿದರು.ಸದಸ್ಯರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕವು, ಇನ್ನು ಕೆಲವು ಪ್ರಶ್ನೆಗಳಿಗೆ ಬರವಸೆ,ಮತ್ತು ಕೆಲವಕ್ಕೆ ಮೌನಸಿಕ್ಕಿತು,ವರ್ಷವಾದರೂ ಉದ್ಘಾಟನೆ ಕಾಣದ ಮೂತ್ರಾಲಯ ಶೌಚಾಲಯಗಳಿಗೆ ಉದ್ಘಾಟನಾಭಾಗ್ಯಕ್ಕಾಗಿ ಆಗ್ರಹಿಸಿದರು,ಬೀದಿಬದಿ ವ್ಯಾಪಾರಿಗಳ ಕುಠಿರಗಳು ನೆಲಸಮವಾಗಿ ವರ್ಷಕಳೆದರೂ ಮೇಲೇಳದಮಳಿಗೆಗಳಬಗ್ಗೆ,ಅಧ್ಯಕ್ಷ,
ಉಪಾಧ್ಯಕ್ಷ,ಸದಸ್ಯರುಗಳ ಗೌರವಧನದ ಪರಿಷ್ಕರಣೆಯ ಬಗ್ಗೆ,ಆಸ್ತಿ ತೆರಿಗೆ,ನೀರಿನ ತೆರಿಗೆಗಳ ಪರಿಷ್ಕರಣೆಯ ಬಗ್ಗೆ ತೀವ್ರ ಚರ್ಚೆ ನಡೆಯಿತು.ಎರಡು ಬಾರಿ ಮುಂದೂಡಲ್ಪಟ್ಟು ತೀವ್ರ ಕುತೋಹಲ ಕೆರಳಿಸಿದ್ದ ಮಾರ್ಚ್ ಆಯವ್ಯಯ ಸಭೆ ಅಂತು ಇಂತೂ ಮಂಗಳವಾರ ಯಶಸ್ವಿಯಾಗಿ ನಡೆಯುವ ಮೂಲಕ ಕುತೋಹಲಕ್ಕೆ ತೆರೆ ಎಳೆಯಿತು.

Leave a Reply

Your email address will not be published. Required fields are marked *