ಕಮರ್ಷಿಯಲ್ ಸಿಲಿಂಡ‌ರ್ ಸಿಗದೆ ಅನೇಕ ಹೋಟೆಲ್ ಗಳು ಬಾಗಿಲು ಹಾಕಿವೆ. ತಿಂಡಿ ತಿನಿಸಿಗಾಗಿ ಗ್ರಾಹಕರು ಹೊಟೇಲ್ ಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಮರ್ಷಿಯಲ್ ಸಿಲಿಂಡರ್ ಅಭಾವ ಇದೆ, ಆದರೆ ಗೃಹ ಬಳಕೆ ಸಿಲಿಂಡರ್ ಗಳ ಅಭಾವ ಇಲ್ಲ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ನಗರದಲ್ಲಿ ಗೃಹ ಬಳಕೆಯ ಸಿಲಿಂಡರ್ ಗಾಗಿ ಜನರು ಸಾಲುಗಟ್ಟಿ ನಿಂತಿರುವ ದೃಶ್ಯವಂತೂ ಏಜೆನ್ಸಿ ಅಂಗಡಿಗಳ ಮುಂದೆ ಕಂಡು ಬರುತ್ತಿದೆ.

ನಗರದ ಗ್ಯಾಸ್ ಏಜೆನ್ಸಿ ಮುಂದೆ ಸಿಲಿಂಡರ್ ಗಾಗಿ ನೂರಾರು ಜನರು ಖಾಲಿ ಸಿಲಿಂಡರ್ ಗಳನ್ನು ಹಿಡಿದು ಸಾಲುಗಟ್ಟಿ ನಿಂತಿದ್ದು ಕಂಡು ಬಂತು, ಕಮರ್ಷಿಯಲ್ ಸಿಲಿಂಡರ್ ಜೊತೆಗೆ ಗೃಹ ಬಳಕೆ ಸಿಲಿಂಡರ್ ಅಭಾವ ಸೃಷ್ಟಿಯಾಗಿದೆ. ಕಮರ್ಷಿಯಲ್ ಸಿಲಿಂಡರ್ ಗಳ ಕೊರತೆ ಇದೆ. ಆದ್ರೆ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ, ಯಾವುದೇ ಕಾರಣಕ್ಕೂ ಕೃತಕ ಅಭಾವ ಸೃಷ್ಟಿಸುವ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದು,  ನಗರದಲ್ಲಿ ಕಮರ್ಷಿಯಲ್ ಜೊತೆಗೆ ಗೃಹ ಬಳಕೆ ಸಿಲಿಂಡರ್ ಗಳ ಕೊರತೆ ಇದೆ ಎನ್ನುವುದಕ್ಕೆ ಸಿಲಿಂಡರ್ ಗಾಗಿ ಜನರು ಗ್ಯಾಸ್ ಏಜೆನ್ಸಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿರುವುದೇ ಸಾಕ್ಷಿ.

ಕಮರ್ಷಿಯಲ್ ಸಿಲಿಂಡರ್ ಗಳು ಸಿಗದೆ ಇರುವುದರಿಂದ ನಗರದಲ್ಲಿ ಹಲವಾರು ಹೊಟೇಲ್ ಗಳು ಈಗಾಗಲೇ ಬಂದ್ ಮಾಡಲಾಗಿದೆ. ಕೆಲವು ಹೊಟೇಲ್ ಮಾಲೀಕರು ದುಬಾರಿ ಹಣ ನೀಡಿ ಸಿಲಿಂಡರ್ ತಂದರೆ, ಇನ್ನು ಕೆಲವರು ಗೃಹ ಬಳಕೆಯ ಸಿಲಿಂಡರ್ ಗಳನ್ನು ತಂದು ಹೊಟೇಲ್ ನಡೆಸುವುದು ಕಂಡು ಬಂದಿದೆ. ಇಲಾಖೆ ಸಿಲಿಂಡರ್ ಅಭಾವ ಇಲ್ಲ ಎನ್ನುತ್ತದೆ. ಸಿಲಿಂಡರ್ ಗಾಗಿ ಜನರು ಸಾಲುಗಟ್ಟಿ ಏಜೆನ್ಸಿ ಮುಂದೆ ನಿಂತಿರುವುದು ಎಲ್ಲೆಡೆ ಕಾಣುತ್ತದೆ. ಹಾಗಾದರೆ ಸಿಲಿಂಡರ್ ಅಭಾವ ಸೃಷ್ಟಿಸುತ್ತಿರುವವರು ಯಾರು ? ಇದಕ್ಕೆ ಯಾರು ಹೊಣೆಗಾರರು ? ಕೂಡಲೇ ಅಧಿಕಾರಿಗಳು ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎನ್ನುವುದು ಗ್ರಾಹಕರು ಬೇಡಿಕೆಯು ಆಗಿದೆ.

Leave a Reply

Your email address will not be published. Required fields are marked *