ಮಾನ್ವಿ : ಪಟ್ಟಣದ ಬಿ ವಿ ಆರ್ ಇಂಟರ್ ನ್ಯಾಷನಲ್ ಶಾಲಾ ಕಟ್ಟಡದಲ್ಲಿ ಭಾನುವಾರ ನಡೆದ ಬಿ.ವಿ.ಆರ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಪರೀಕ್ಷೆಯ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸುವ ಬಗ್ಗೆ ಅಧ್ಯಕ್ಷ ಬಿ.ವಿ.ರೆಡ್ಡಿ ಮಾತನಾಡಿದರು.
ಯು ಕೆ ಜಿ ರಿಂದ 8ನೇ ತರಗತಿ ವರೆಗೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಅವಧಿಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಮಾನ್ವಿ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು 2000 ವಿದ್ಯಾರ್ಥಿಗಳು ಭಾಗವಹಿಸಿ ಪರೀಕ್ಷೆಯನ್ನು ಬರೆದರು. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೆಡಲ್ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಯಿತು.
ಈ ಟ್ಯಾಲೆಂಟ್ ಸರ್ಚ್ ಪರೀಕ್ಷೆಯ ಅಭೂತಪೂರ್ವ ಯಶಸ್ಸಿಗೆ ಸಂತೋಷ ವ್ಯಕ್ತಪಡಿಸಿದ ಸಿ.ಇ.ಓ ಶಿವರಾಜ್ ಹಾಗೂ ಅಧ್ಯಕ್ಷ ಬಿ.ವಿ.ರೆಡ್ಡಿ, ತಮ್ಮ ಮಕ್ಕಳನ್ನು ಪರೀಕ್ಷೆಗೆ ಕರೆತಂದ ಪಾಲಕರಿಗೆ ಧನ್ಯವಾದಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *