ಅರಕೇರಾ: ತಾಲೂಕಿನ ಬಿ.ಗಣೇಕಲ್ ಗ್ರಾಮದಲ್ಲಿ ಶ್ರೀ ವಿದ್ಯಾ ಭಾರತಿ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಮಹಿಳೆಯರಿಗಾಗಿ ಮೂರು ತಿಂಗಳ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಏ.1 ರಿಂದ ಆಯೋಜಿಸಲಾಗಿದೆ.
ಸತತ ಏಳು ವರ್ಷಗಳಿಂದ ಗ್ರಾಮೀಣ ಭಾಗದ ಮಹಿಳೆಯರ ಸ್ವಾವಲಂಬನೆ ಜೀವನ ನಡೆಸಲು ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ಈ ತರಬೇತಿ ಹಮ್ಮಿಕೊಳ್ಳಲಾಗುತ್ತದೆ. ಈ ತರಬೇತಿ ನುರಿತ ಅನುಭವದ ತರಬೇತಿದಾರರಿಂದ ಮಾರ್ಗದರ್ಶನ ಹಾಗೂ ಇತರೆ ಕೌಶಲ್ಯಗಳ ಬಗ್ಗೆ ತಿಳಿಸಲಾಗುವುದು.
18 ವರ್ಷ ವಯೋಮಿತಿ, ಯಾವುದೇ ವಿದ್ಯಾರ್ಹತೆ ಅವಶ್ಯಕತೆ ಇರುವುದಿಲ್ಲ, ಆಧಾರ್ ಕಾರ್ಡ್, ಎರಡು ಪೋಟೋ, ರೇಷನ್ ಕಾರ್ಡ್ ಹೊಂದಿರುವವರು ಈ ತರಬೇತಿಗೆ ಅರ್ಹರಾಗಿದ್ದಾರೆ. ತರಬೇತಿಯು ಸಂಪೂರ್ಣ ಉಚಿತವಾಗಿದೆ ಎಂದು ಶ್ರೀ ವಿದ್ಯಾ ಭಾರತಿ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಹಂಪಣ್ಣ ಪಲ್ಲೇದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9845670193, 9901296287 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

