ತಾಳಿಕೋಟೆ: ಪಟ್ಟಣದ ದಿವಂಗತ ಸಂಗನಗೌಡ ಪಾಟೀಲ ಪ್ರತಿಷ್ಠಿತ ಮನೆತನದವರಾದ ಬಾಪುಗೌಡ ಸಂಗನಗೌಡ ಪಾಟೀಲ ಹಾಗೂ ಅಶೋಕಗೌಡ ಪಾಟೀಲ ಇವರನ್ನು ಕಲ್ಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರ ಶಾಸಕ ರಾಜುಗೌಡ ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು. ಶನಿವಾರ ಪಟ್ಟಣದ ಆರಾಧ್ಯ ದೈವ ಶ್ರೀ ಬಂಡಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನೂತನವಾಗಿ ನಿರ್ಮಿಸಿದ ರಥದ ಉದ್ಘಾಟನಾ ಸಮಾರಂಭದಲ್ಲಿ ಪಾಟೀಲ ಸಹೋದರರ ಧರ್ಮ ಸೇವೆಗಾಗಿ ಅವರನ್ನು ಉಭಯ ಶಾಸಕರು ಗೌರವಿಸಿದರು. ಈ ಸಂದರ್ಭದಲ್ಲಿ ಖಾಸ್ಗತೇಶ್ವರ ಮಠದ ಮುಖ್ಯಸ್ಥ ವೇ.ಮೂ.ಮುರಗೇಶ ವಿರಕ್ತಮಠ, ಗಣ್ಯರಾದ ಬಿ.ಎಸ್. ಪಾಟೀಲ ಯಾಳಗಿ, ಸಿದ್ದನಗೌಡ ಪಾಟೀಲ ನಾವದಗಿ,ಎಚ್.ಎಸ್.ಪಾಟೀಲ, ಕಾಶಿನಾಥ ಮುರಾಳ, ಮಡು ಸೌಕಾರ, ಶರಣಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಅಶೋಕಗೌಡ ಪಾಟೀಲ, ರಾಜುಗೌಡ ಪಾಟೀಲ,ಪರುಶುರಾಮ ತಂಗಡಗಿ ಮತ್ತಿತರರು ಇದ್ದರು.

