ತಾಳಿಕೋಟಿ: ಪಟ್ಟಣದ ಅಂಬಿಗರ ಚೌಡಯ್ಯ ಸಮಾಜದ ವತಿಯಿಂದ ಕಲ್ಬುರ್ಗಿ ದಕ್ಷಿಣ ಭಾಗದ ಶಾಸಕರಾದ ಅಲ್ಲಮಪ್ರಭು ಪಾಟೀಲರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶನಿವಾರ ಪಟ್ಟಣದ ಆರಾಧ್ಯ ದೈವ ಶ್ರೀ ಬಂಡಿ ಬಸವೇಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸಮಾಜದ ಪ್ರಮುಖರಾದ ಸುಭಾಸ ಮೂಕಿಹಾಳ ಹಾಗೂ ಪುರಸಭೆ ಮಾಜಿ ಸದಸ್ಯ ಪರಶುರಾಮ ತಂಗಡಗಿ ಇವರು ಗೌರವಿಸಿದರು. ಈ ಸಮಯದಲ್ಲಿ ಪುರಸಭೆ ಮಾಜಿ ಸದಸ್ಯ ನಿಂಗಣ್ಣ ಕುಂಟೋಜಿ, ಸುರೇಶ ಸರೂರ, ಶಾಂತಗೌಡ ಮದರ್ಕಲ್, ಪಾಟೀಲ ಮತ್ತಿತರರು ಇದ್ದರು.

