ಕಲಬುರಗಿ : ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಲ್ಲಿರುವ ವಿದ್ಯಾನಗರದ ಕಾಲೋನಿಯ ಮಲ್ಲಿಕಾರ್ಜುನ ಸಮುದಾಯ ಭವನದ ಆವರಣದಲ್ಲಿ ಏಪ್ರಿಲ್-2 ರಂದು ಸಾಯಂಕಾಲ 6:೦೦ ಗಂಟೆಗೆ, ಶಿವಶರಣೆ ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ್ 11ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಹಾಗೂ ವಿದ್ಯಾನಗರ ವೇಲ್‌ಫೇರ್ ಸೋಸೈಟಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಇದೇ ಸಂದರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ್ ಬಳಗದವರಿಂದ ಸಾಮೂಹಿಕವಾಗಿ ಗೀಗಿಪದ ಜರುಗಲಿದೆ ಎಂದು ವಿದ್ಯಾನಗರ ವೇಲ್‌ಫೇರ್ ಸೋಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಯಂಕಾಲ 6:೦೦ ಗಂಟೆಗೆ ಸಂಗೀತಾ ಕಾರ್ಯಕ್ರಮ, 6:30 ಗಂಟೆಗೆ ಅಕ್ಕಮಹಾದೇವಿ ತೊಟ್ಟಿಲು ಕಾರ್ಯಕ್ರಮ, 7:೦೦ ಗಂಟೆಗೆ ಟ್ರಸ್ಟಿನ್ ವಾರ್ಷಿಕೋತ್ಸವ ಸಮಾರಂಭದ ಉಧ್ಘಾಟನೆ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ, ಮಾನ್ಯ ಫೌಜಿಯಾ ತರನ್ನುಮ್ಮ ನೇರವೇರಿಸಲಿದ್ದಾರೆ. ಎಮ್.ಆರ್.ಎಮ್.ಸಿ ಕಾಲೇಜಿನ ಸಹ-ಪ್ರಾಧ್ಯಾಪಕರು, ಹಾಗೂ ಕದಳಿ ಶ್ರೀ ಆಸ್ಪತ್ರೆಯ ನಿರ್ದೇಶಕರಾದ ಡಾ. ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ.ಶಿವಲೀಲಾ ಚಟ್ನಳ್ಳಿ ಹಾಗೂ ಉಮೇಶ ಶೆಟ್ಟಿ ಅವರಿಗೆ ವಿಶೇಷ ಸತ್ಕಾರ ಸಮಾರಂಭ ಜರುಗುವುದು. ವಿದ್ಯಾನಗರ ವೇಲ್‌ಫೇರ್ ಸೋಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಅತಿಥಿಗಳಾಗಿ ಆಗಮಿಸಲಿದ್ದಾರೆ. ಟ್ರಸ್ಟಿನ್ ಅಧ್ಯಕ್ಷ ಶ್ರೀಮತಿ ರತ್ನಮ್ಮ ನಿಂಬೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಟ್ರಸ್ಟಿನ ಪದಾಧಿಕಾರಿಗಳಾದ ವಿಜಯಲಕ್ಷ್ಮಿ ರಟಕಲ್, ರಾಜೇಶ್ರೀ ಕಂಠಿ, ತಾರಾ ಪಾಟೀಲ, ಮಧು ಹಿಂದೊಡ್ಡಿ, ಹಾಗೂ ಇತರರು ಉಪಸ್ಥಿತರಿರುವರು.

