ತಾಳಿಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ಅಸ್ಕಿ ಗ್ರಾಮದಲ್ಲಿ ಈರಮ್ಮ ಪ್ಯಾಟಿ ಅವರಿಗೆ ವಾತ್ಸಲ್ಯ ಮನೆ ಮಂಜೂರಾತಿ ಆಗಿದ್ದು ಗುರುವಾರ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಜರುಗಿತು.
. ಜಿಲ್ಲಾ ನಿರ್ದೇಶಕರು ಮೋಹನ್ ನಾಯ್ಕ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಆಶಾದಾಯಕ ಕಾರ್ಯಕ್ರಮ ವಾತ್ಸಲ್ಯ ಮನೆ ರಚನೆ, ಮಾಸಾಶಾನ ಪಲಾನುಭವಿಗಳಿಗೆ ನಿರ್ಗತಿಕರಿಗೆ ಸೂರಿಲ್ಲದವರಿಗೆ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಪೂಜ್ಯರು ವಾತ್ಸಲ್ಯ ಮನೆ ರಚನೆ ಮಾಡುತ್ತಿದ್ದಾರೆ.
ಯೋಜನೆಯಲ್ಲಿ ಸುಮಾರು 18000 ವಾತ್ಸಲ್ಯ ಪಲಾನುಭವಿಗಳಿಗೆ ಪ್ರತಿ ತಿಂಗಳು ಮಾಸಾಶಾನ ರೂ1000, ನೀಡಲಾಗುತ್ತಿದ್ದು 800 ವಾತ್ಸಲ್ಯ ಮನೆ ರಚನೆ ಮಾಡಿದ್ದು ಪಲಾನುಭವಿಗಳು ನೆಮ್ಮದಿಯ ಜೀವನ ನಡೆಸಲು ದಾರಿಮಾಡಿ ಕೊಟ್ಟಿದ್ದಾರೆ
ಇಷ್ಟೇ ಅಲ್ಲದೇ ಪೂಜ್ಯರು ಕೆರೆ ಹೂಳೆತ್ತುವುದು , ಸುಜ್ಞಾನ ಶಿಷ್ಯ ವೇತನ, ಜ್ಞಾನ ದೀಪ ಶಿಕ್ಷಕರ ನೇಮಕಾತಿ ಇನ್ನು ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕೆರೆ ಸಮಿತಿಯ ಅಧ್ಯಕ್ಷ ಜಲಪುರ ಸಿದ್ದನ ಗೌಡ ಬಸವನಗೌಡ ಬಿರಾದರ ಅವರು ಮಾತನಾಡಿ ಸರ್ಕಾರ ಮಾಡದಂತಹ ಕಾರ್ಯಕ್ರಮಗಳನ್ನು ಪೂಜ್ಯರು ಮಾಡುತ್ತಿದ್ದಾರೆ ಅವರ ಕಾರ್ಯಕ್ರಮಗಳಲ್ಲಿ ನಾವು ಪಾಲ್ಗೊಂಡಿರುವುದು ನಮ್ಮೆಲ್ಲರ ಪುಣ್ಯ ಮಂಜುನಾಥ ಸ್ವಾಮಿ ಪೂಜ್ಯರಿಗೆ ಮತ್ತು ಅಮ್ಮನವರಿಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಭುಗೌಡ ಬಿರಾದಾರ್ ಅವರ ಮಾತನಾಡಿ ಮಕ್ಕಳಿಲ್ಲದರಿಗೆ ನಿರ್ಗತಿಕರಿಗೆ ವಾತ್ಸಲ್ಯ ಅಂದರೆ ತಾಯಿಯ ಮಮತೆ , ಕರುಣೆಯ ಪ್ರತಿರೂಪವೇ ” ವಾತ್ಸಲ್ಯಮನೆ ” ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ನೀಡುವುದಾಗಿ ತಿಳಿಸಿದರು
ಕಾರ್ಯಕ್ರಮದಲ್ಲಿ ಸಂಗನಗೌಡ ವನಕಿಹಾಳ, ಸಿ.ಎಂ. ಟಕ್ಕಳಿಕೆ ವಿಶ್ವನಾಥ್ ಕಾಶಿನಾಥ್ ತಳವಾರ್ ಬಿಜಾಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು , ಅಯ್ಯಪ್ಪ ಮುಗುಳಿ ಗ್ರಾಮ ಪಂಚಾಯಿತಿ ಸದಸ್ಯರು, ರೇವಣಸಿದ್ಧ ಕವಡಿಮಠ ಗ್ರಾಮ ಪಂಚಾಯಿತಿ ಸದಸ್ಯರು , ಊರಿನ ಗಣ್ಯರಾದ ಶಾಂತಯ್ಯ ಚನ್ನಬಸಯ್ಯ ಹಿರೇಮಠ , ಎಂ.ಕೆ. ಇಂಚಗೇರಿ , ರೇವಣಸಿದ್ದಪ್ಪ ಹಂಚಲಿ, ಬಾಲಪ್ಪ ಗೌಡ ಬಿರಾದರ್, ಬಸವರಾಜ ಎಂ. ಪಡಶೆಟ್ಟಿ, ಜ್ಞಾನ ವಿಕಾಸ ಸಮನ್ವಯಧಿಕಾರಿ ಆಶಾ ರಿಕವರಿ ಮೇಲ್ವಿಚಾರಕ ಹನುಮಂತ, ವಲಯದ ಮೇಲ್ವಿಚಾರಕ ಸಿದ್ದಲಿಂಗಪ್ಪ, ಸ್ಥಳೀಯ ಸೇವಾ ಪ್ರತಿನಿಧಿ ನೀಲಮ್ಮ , ಸೇವಾದಾರರು ನಿರ್ಮಲ ಮತ್ತು ಶ್ರೀದೇವಿ, ಸುವಿಧಾ ಸಹಾಯಕರು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ತಾಲ್ಲೂಕು ಯೋಜನಾಧಿಕಾರಿ ಬಿನೋಯಿ ಸ್ವಾಗತಿಸಿದರು ತಾಲ್ಲೂಕು ಲೆಕ್ಕ ಪರಿಶೋಧಕ ಘನರಾಜ್ ವಂದಿಸಿದರು.

