ಬೆಂಗಳೂರು: ನ 17 2025 ರಂದು ಪ್ರಕಟಿಸಿರುವ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಸಂಬಂಧಿಸಿದ ಅಧಿಸೂಚನೆ ಸಂಖ್ಯೆ–1 ಹಾಗೂ 11ರ ಕೋಷ್ಟಕದ ಕ್ರಮ ಸಂಖ್ಯೆ (5)ರಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಘೋಷಿಸಲಾಗಿದ್ದ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ: ಮಾ 31 2026 ನಡೆಯುತ್ತಿದೆ (ಮಂಗಳವಾರ) ಬದಲಾಗಿ ಮಾ 30 (ಸೋಮವಾರ) ಎಂದು ಮಾರ್ಪಡಿಸಿ ಆದೇಶಿಸಲಾಗಿದೆ.
ಸದರಿ ರಜೆಯನ್ನು ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ಸ್ ಅಧಿನಿಯಮ, 1881 (1881ರ ಅಧಿನಿಯಮ ಸಂಖ್ಯೆ 26) ರ ಅನ್ವಯವೂ ಘೋಷಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಹಾಗೂ ಅವರ ಹೆಸರಿನಲ್ಲಿ ಈ ಆದೇಶ ಹೊರಡಿಸಲಾಗಿದೆ.

Leave a Reply

Your email address will not be published. Required fields are marked *