ತಾಳಿಕೋಟೆ: ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಇಚೇಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಅವರ ನಿಲುವು ಮತ್ತು ನಿರ್ಣಯವನ್ನು ವಿರೋಧಿಸಿ ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಬೆಂಗಳೂರು ತಾಲ್ಲೂಕು ಶಾಖೆ ವತಿಯಿಂದ ತಹಶೀಲ್ದಾರ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ವೇತನವನ್ನು ಪರಿಷ್ಕರಿಸಲು 8ನೇ ವೇತನ ಆಯೋಗವನ್ನು ರಚನೆ ಮಾಡಿದೆ. ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮ್ ಅವರು ಆರ್ಥಿಕ ಬಿಲ್ಲನ್ನು ಮಂಡಿಸುವಾಗ 1.4.2026ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ ಎಂಬ ನಿರ್ಣಯವನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇದರಿಂದ ನಿವೃತ್ತಿಯಾದ ಸರ್ಕಾರಿ ನೌಕರರು ಹಾಗೂ ಕುಟುಂಬ ಪಂಚಣಿದಾರರು ಆರ್ಥಿಕ ಸಂಕಷ್ಟಗೊಳಗಾಗುತ್ತಾರೆ
ಎಂದು ತಿಳಿಸಿರುವ ಸಂಘಟನೆಯು ಶಾಂತಿಯುತವಾಗಿ ಕಪ್ಪುಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡುವ ಮುಖಾಂತರ ತಹಶೀಲ್ದಾರರವರಿಗೆ ಮನವಿ ಸಲ್ಲಿಸಿದರು.
. ಈ ಸಂದರ್ಭದಲ್ಲಿ ತಾಳಿಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಂ .ಹಿರೇಮಠ, ಉಪಾಧ್ಯಕ್ಷ ಬಿ.ಜಿ.ಚಿತಾಪುರ, ಪ್ರಧಾಮ ಕಾರ್ಯದರ್ಶಿ ಜಿ.ಎಸ್.ದೇಸಾಯಿ, ಸಂಘದ ಆಡಳಿತ ಮಂಡಳಿ ಹಾಗೂ ಸದಸ್ಯರುಗಳಾದ ಎಂ.ಬಿ.ಪತ್ತಾರ, ಎಂ.ಎಸ್.ಹುಲ್ಲೂರ, ಎಸ್.ಟಿ.ಬೊಮ್ಮನಳ್ಳಿ, ವಿ.ಎಂ.ಕೋರಿ, ಎಸ್.ಎಸ್.ಸಿಂದಗಿ, ಸಿ.ಎಸ್.ಯರಗಲ್ಲ, ಎಂ.ಬಿ.ಅಮಲ್ಯಾಳ, ವಿ.ಜಿ.ಗಣಾಚಾರಿ, ಐ.ವೈ.ವಿಜಾಪುರ, ಎಂ.ಬಿ.ಮೇಟಿ, ಎಸ್.ಎಚ್.ಬಾಗವಾನ, ಎಸ್.ಎಂ.ಸಾವರದ, ಎಸ್.ಎ.ನಮಾಜಕಟ್ಟಿ, ಎಸ್.ಎಚ್.ದೇಸಾಯಿ, ಎ.ವೈ.ವಿಜಾಪುರ,ಸಲಿಮಾ, ಆಶಾಬಿ, ಮಹಾದೇವಿ ಬಿದರಿ,ಎಲ್.ಬಿ.ಕೊಡೆಕಲ್ಲ, ಎಲ್.ವಿ.ಪಾಟೀಲ ಎಂ.ಎಚ್.ನಾವದಗಿ, ಇತರರಿದ್ದರು.

