ರಾಯಚೂರು ಮಾರ್ಚ್ 24 (ಕರ್ನಾಟಕ ವಾರ್ತೆ): ಜಿಲ್ಲೆಯ ಸಿಂಧನೂರಿನ ನಗರಸಭೆಯಿಂದ 2026-27ನೇ ಸಾಲಿನ ಶೇ.7.25 & ಶೇ.5 ಯೋಜನೆಗಳಿಗೆ ಕಾಯ್ದಿರಿಸಲಾದ ಎಸ್.ಎಫ್.ಸಿ (ಮುಕ್ತ ನಿಧಿ) ಅನುದಾನಗಳ ಅನುಷ್ಠಾನಕ್ಕಾಗಿ ವೈಯಕ್ತಿಕ ಚಟುವಟಿಕೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಪೂರ್ಣ ವಿವರದ ಪ್ರಕಟಣೆಯನ್ನು ನಗರಸಭೆ ಕಾರ್ಯಾಲಯ ನೋಟಿಸ್ ಫಲಕದಲ್ಲಿ ಹಾಗೂ ವೆಬ್‌ಸೈಟ್ ವಿಳಾಸ: http://www.sindhanurcity.mrc.gov.in/ ನಲ್ಲಿ ಪ್ರಕಟಿಸಲಾಗಿದೆ.
ಅರ್ಹ ಫಲಾನುಭವಿಗಳು ವೈಯಕ್ತಿಕ ಚಟುವಟಿಕೆವಾರು ಮುಂದೆ ತಿಳಿಸಿರುವ ಅಗತ್ಯ ಎಲ್ಲಾ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳ ಧೃಢೀಕರಣದೊಂದಿಗೆ ಏಪ್ರಿಲ್ 22ರ ಸಂಜೆ 5.30ರೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಕೊನೆಯ ದಿನಾಂಕ ಮೀರಿ ಬಂದಂತಹ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ವೈಯಕ್ತಿಕ ಚಟುವಟಿಕೆಗಳ ಯೋಜನೆಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಂಡು ಅರ್ಜಿಗಳನ್ನು ಸಲ್ಲಿಸಬೇಕೆಂದು ಸಿಂಧನೂರು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

