ತಾಳಿಕೋಟಿ: ಪಟ್ಟಣದಲ್ಲಿ ಎಪ್ರೀಲ 5 ರಂದು ತಾಲೂಕ ಆಡಳಿತದ ವತಿಯಿಂದ ಆಚರಿಸಲಿರುವ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರ 119 ನೇ ಜಯಂತಿ ಕುರಿತು ಚರ್ಚಿಸಲು ಮಾರ್ಚ್ 26 ಗುರುವಾರದಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಅಂದು ಮುಂಜಾನೆ 11:00 ಘಂಟೆಗೆ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ಈ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ತಹಶೀಲ್ದಾರ್ ಡಾ.ವಿನಯಾ ಹೂಗಾರ ಅವರು ವಹಿಸುವರು. ಸದರಿ ಸಭೆಯಲ್ಲಿ ಸಮಾಜದ ಪ್ರಮುಖರು, ಪಟ್ಟಣದ ಗಣ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ತಹಸಿಲ್ದಾರ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

