ತಾಳಿಕೋಟೆ:ಪಟ್ಟಣದ ಸಾಯಿಬಾಬಾ ಸೇವಾಟ್ರಸ್ಟ ವತಿಯಿಂದ ಶಿರಡಿ ಸಾಯಿಬಾಬಾ ಜಯಂತ್ಯೋತ್ಸವ ಹಾಗೂ 22ನೆಯ ವಾರ್ಷೀಕೋತ್ಸವ ಕಾರ್ಯಕ್ರಮವು ವಾಸವಿ ಕಲ್ಯಾಣಮಂಟಪದಲ್ಲಿ ನಾಳೆ (ಮಾ.26)ರಂದು ಗುರುವಾರ ಜರುಗಲಿದೆ.
ಅಂದು ಬೆಳಿಗ್ಗೆ 7.30ಗಂಟೆಗೆ ನಿಮಿಷಾಂಬಾದೇವಿ ಗುಡಿಯಿಂದ ವಾಸವಿ ಕಲ್ಯಾಣ ಮಂಟಪದವರೆಗೆ ಪಲ್ಲಕ್ಕಿ ಉತ್ಸವ, 9.15ಕ್ಕೆ ಪ್ರಾರ್ಥನೆ, 9.30ಕ್ಕೆ ಸಾಯಿಬಾಬಾರವರ ಮಹಾಪೂಜೆ ಹಾಗೂ ಪಂಚಾಮೃತ ಅಭಿಷೇಕ, 10.30ಕ್ಕೆ ಸಾಯಿಬಾಬಾರ ತೊಟ್ಟಿಲ ಸೇವೆ, ಭಜನಾ ಕಾರ್ಯಕ್ರಮ, ಸಾಯಿ ಭಕ್ತರಿಂದ ಸಂಗೀತ ಸೇವೆ. ವೇ.ಮೂ.ಸಂತೋಷ ಆನಂದಭಟ್ ಜೋಶಿ ಅವರಿಂದ ಸಾಯಿ ಕಥಾಮೃತ, ಮಹಾಮಂಗಳಾರತಿ ನಂತರ ಮಹಾಪ್ರಸಾದ ನಡೆಯುವುದು ಎಂದು ಅಧ್ಯಕ್ಷ ಬಸವರಾಜ ಮದರಕಲ್ಲ ಹಾಗೂ ಉಪಾಧ್ಯಕ್ಷ ಎಂ.ಜಿ.ಪಾಟೀಲ ಗುಂಡಕನಾಳ ಅವರು ಪ್ರಕಟಣೆಯಿಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *